ಮಂಗಳೂರು: ದಕ್ಷಿಣ ಭಾರತದ ಸುನ್ನಿ ಮುಸ್ಲಿಮರ ಆಧ್ಯಾತ್ನಿಕ ನೇತಾರರು, ಉಳ್ಳಾಲದ ಖಾಝೀಯೂ ಆದ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಇಂದು(ಜು.8) ನಿಧನರಾಗಿದ್ದಾರೆ.
ಕೇರಳದ ಕಣ್ಣರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಮನೆಯಲ್ಲಿ ಸಿದ್ಧರಾಗುತ್ತಿದ್ದರು. ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ ಎನ್ನಲಾಗಿದೆ.
ತಂಙಳ್ ಅವರ ನಿಧನವು ಮುಸ್ಲಿಂ ಸಮುದಾಯ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಸ್‌ಡಿಪಿಐ ಸಂತಾಪ ಸೂಚಿಸಿದೆ.
ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸುನ್ನಿ ಸಮೂಹಕ್ಕೆ ಆಧ್ಯಾತ್ಮಿಕ ನಾಯಕತ್ವ ನೀಡಿ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ತಂಙಳ್ ಹೊಂದಿದ್ದರು.





