ಬೆಂಗಳೂರು: ನಾಳೆ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಸ್ಥಾನಗಳು ನಾಳೆ ಕ್ಲೋಸ್ ಆಗಲಿವೆ.
ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯ ನಾಳೆ ಬೆಳಿಗ್ಗೆಯಿಂದಲೇ ಬಂದ್ ಆಗಲಿದೆ. ಶಿವನಿಗೆ ಅಭಿಷೇಕ ನೆರವೇರಿಸಿ ಬೆಳಿಗ್ಗೆ 11 ಗಂಟೆಗೆ ದೇವಾಲಯ ಕ್ಲೋಸ್ ಮಾಡಲಾಗುತ್ತದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೆಪ್ಟೆಂಬರ್.7ರಂದು ಚಂದ್ರಗ್ರಹಣ ಇರುವುದರಿಂದ ನಿತ್ಯದ ಸೇವೆ, ದರ್ಶನ ಸೇವಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಜ್ಯದ ಇನ್ನೂ ಅನೇಕ ದೇವಾಲಯಗಳು ಕೂಡ ನಾಳೆ ಬಂದ್ ಆಗಲಿದ್ದು, ಚಂದ್ರಗ್ರಹಣ ಮುಗಿದ ಬಳಿಕ ಬಾಗಿಲು ತೆರೆಯಲಿವೆ.





