Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಒಂದೇ ದಿನಕ್ಕೆ ಕೋಟಿ ಒಡೆಯನಾದ ತಿರುಪತಿ ತಿಮ್ಮಪ್ಪ

Tirupati Thimmappa temple

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಿರುಪತಿ- ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಒಂದೇ ದಿನ ಹುಂಡಿಗೆ ದಾಖಲೆಯ 5.3 ಕೋಟಿ ಸಂಗ್ರಹವಾಗಿದೆ.

ದೇವಸ್ಥಾನಕ್ಕೆ ಯಾತ್ರಾರ್ಥಿಗಳ ಆಗಮನ ತುಸು ಕಡಿಮೆಯಾಗಿದ್ದರೂ ಈ ಸಂಗ್ರಹಣೆಯು ಕಳೆದ ವರ್ಷದಲ್ಲಿ ದೇವಾಲಯವು ಸ್ವೀಕರಿಸಿದ ಅತಿ ಹೆಚ್ಚು ಏಕದಿನದ ಹುಂಡಿಯಾಗಿದೆ.

ತಿರುಮಲ ದೇವಸ್ಥಾನದಲ್ಲಿ 78,730 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಇದು ಸಾಮಾನ್ಯವಾಗಿ ಹಬ್ಬ ಹರಿದಿನಗಳು ಮತ್ತು ಬೇಸಿಗೆ ಕಾಲದಲ್ಲಿ ದಾಖಲಾಗುವ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾತ್ರಾರ್ಥಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ. ಸಾಮಾನ್ಯ ಜನದಟ್ಟಣೆಯ ಹೊರತಾಗಿಯೂ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಹುಂಡಿಗೆ 5.3 ಕೋಟಿ ರೂ. ಕಾಣಿಕೆ ಹರಿದುಬಂದಿದೆ. ಇದು ಇದುವರೆಗಿನ ವರ್ಷದ ಅತ್ಯಧಿಕ ಕಾಣಿಕೆಯಾಗಿದೆ.

2023ರ ಜನವರಿ.2ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಕಾಣಿಕೆ ಸಂಗ್ರಹವಾಗಿತ್ತು. ಆ ದಿನ ದೇವಾಲಯಕ್ಕೆ 7.68 ಕೋಟಿ ರೂ. ಒಂದೇ ದಿನದಲ್ಲಿ ಹರಿದುಬಂದಿತ್ತು. ಹಿಂದೆಯೂ 6 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿರುವ ನಿದರ್ಶನ ಇದೆ.

Tags:
error: Content is protected !!