Mysore
33
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಅಣ್ಣ ಸಿಎಂ ಆಗಲು ಕಾಲ ಕೂಡಿ ಬರಬೇಕು: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಅಣ್ಣ ಸಿಎಂ ಆಗಲಿ ಎನ್ನುವ ಆಸೆ ಈಗಲೂ ಇದೆ. ಇದಕ್ಕೆ ಕಾಲ ಕೂಡಿ ಬರಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಹೈಕಮಾಂಡ್‌ ಭೇಟಿ ಯಾವುದೂ ಹೊಸತಲ್ಲ. ನಿರಂತರವಾಗಿ ಭೇಟಿ ಮಾಡುತ್ತಲೇ ಇರುತ್ತಾರೆ. ಹೈಕಮಾಂಡ್‌ ಮುಂದೆ ಡಿಮ್ಯಾಂಡ್‌ ಇಡಲು ಏನಿದೆ. ಪಾರ್ಟಿ ಅವರನ್ನು ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂದರು.

ಇನ್ನು ಈಗ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇದ್ದಾರೆ. ಸ್ಥಾನ ಬೇಕು ಎಂದು ಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗುತ್ತಾ ಇರುತ್ತಾರೆ. ಹೈಕಮಾಂಡ್‌ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಹೈಕಮಾಂಡ್‌ ಭೇಟಿ ಮಾಡಿ ಬರುವುದು ಪ್ರವೃತ್ತಿ. ಡಿಕೆಶಿ ಮುಂದೆ ಯಾವುದೇ ಅಜೆಂಡಾ ಇಲ್ಲ. ಬೇರೆ ಯಾವುದೇ ಚಿಂತನೆಗಳು ಇಲ್ಲ. ಹಕ್ಕು ಎನ್ನುವ ಪ್ರಶ್ನೆಯೂ ಇಲ್ಲ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಡಿಕೆಶಿ ಶಿವರಾತ್ರಿ ಹಬ್ಬದಂದು ಅಮಿತ್‌ ಶಾ ಭೇಟಿಯ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತಂದಿದ್ದರು ಎಂದು ಹೇಳಿದರು.

 

Tags:
error: Content is protected !!