Mysore
16
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಪದವಿ ಹಾಗೂ ಶಿಕ್ಷಕರ ಕ್ಷೇತ್ರಗಳ ಮತಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಚಿಂತನೆ : ಇಸಿಐ ಕಾರ್ಯದರ್ಶಿ ಸುಮಾನ್‌ಕುಮಾರ್‌ ದಾಸ್‌

ಚಿತ್ರದುರ್ಗ : ಎಲ್ಲಾ ಅರ್ಹ ಮತದಾರರು ಹೆಸರು ನೊಂದಾಯಿಸಿಕೊಳ್ಳಲು ಅನುವಾಗುವಂತೆ, ಪದವಿ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಭಾರತೀಯ ಚುನಾವಣೆ ಆಯೋಗದ ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಗ್ನೇಯ ಪದವಿಧರ ಕ್ಷೇತ್ರದ ಮತಪಟ್ಟಿ ತಯಾರಿಕೆ ಸಿದ್ದತೆಗಳನ್ನು ವೀಕ್ಷಿಸಿದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಷ್ಟು ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳಿಗೆ ಹೆಚ್ಚು ಆಸಕ್ತಿ ತೋರದಿರುವುದು ಕಂಡುಬಂದಿದೆ. ಈ ಕಾರಣದಿಂದ ಸುಧಾರಣೆ ತರಲು ಉದ್ದೇಶಿಸಲಾಗಿದೆ ಎಂದರು.

೨೦೧೬ ರ ಸರ್ವೋಚ್ಛ ನಾಯಾಲಯದ ತೀರ್ಪಿನ ಅನುಸಾರ ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುವ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಒಂದು ವರ್ಷ ಮುನ್ನವೇ ಮತದಾರರ ಪಟ್ಟಿ ತಯಾರಿಕೆಗೆ ಸಿದ್ದತೆ ಆರಂಭವಾಗುತ್ತಿದೆ. ಈ ವೇಳೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತಿದೆ ಎಂದರು.

ಇದನ್ನು ಓದಿ: ಡಿ.4ರಂದು ಭಾರತಕ್ಕೆ ಪುಟಿನ್‌

ಈಗಿರುವ ನೊಂದಣಿ ನಿಯಮಗಳನ್ನು ಸರಳ ಹಾಗೂ ಪಾದರ್ಶಕವಾಗಿಸುವ ಸಲುವಾಗಿ ದೇಶದ ಎಲ್ಲಾ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಽಕಾರಿಗಳ ಕಚೇರಿಗಳಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ಚುನಾವಣೆ ಆಯೋಗದ ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ಪದವಿಧರ ಮತದಾರ ನೊಂದಣಿಯಲ್ಲಿ ಸ್ವೀಕೃತ ಹಾಗೂ ತಿರಸ್ಕೃತ ಫಾರಂ-೧೮ ಅರ್ಜಿ ನಮೂನೆಗಳ ವೀಕ್ಷಣೆ ನಡೆಸಿದರು. ನಂತರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿದ ಮತದಾರ ನೊಂದಣಿ ನಿಽಷ್ಟಾಽಕಾರಿಗಳ ಕಚೇರಿಗೆ ಭೇಟಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟರಾಜು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣೆ ಆಯೋಗದ ಅಽನ ಕಾರ್ಯದರ್ಶಿ ಶೀಶ್ ರಾಮ್, ಸಹಾಯಕ ನೊಂದಣಾಧಿಕಾರಿಗಳಾದ ರೈಲ್ವೇ ವಿಶೇಷ ಭೂಸ್ವಾಧೀನಾಧಿಕಾರಿ ಎನ್.ವೆಂಕಟೇಶ್ ನಾಯ್ಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಚಂದ್ರಕುಮಾರ್, ಭದ್ರಾ ಮೇಲ್ದಂಡೆ ಭೂಸ್ವಾಧೀನಾಧಿಕಾರಿ ಟಿ.ಸುರೇಶ್ ಕುಮಾರ್ , ತಹಶೀಲ್ದಾರರು ಉಪಸ್ಥಿತರಿದ್ದರು.

Tags:
error: Content is protected !!