Mysore
20
overcast clouds
Light
Dark

ಡಿಸೆಂಬರ್‌ 14ರಿಂದ ಮಂಗಳೂರು – ಬೆಂಗಳೂರು ನಡುವಿನ ಈ ರೈಲುಗಳು ಸ್ಥಗಿತ; ಕಾರಣವೇನು?

ಡಿಸೆಂಬರ್‌ 14ರಿಂದ 22ರವರೆಗೆ ಬೆಂಗಳೂರು ಹಾಗೂ ಮಂಗಳೂರು ಮತ್ತು ಮೈಸೂರು – ಮಂಗಳೂರು, ಮೈಸೂರು ಅರಸಿಕೆರೆ, ಮೈಸೂರು – ತಾಳಗುಪ್ಪ ನಡುವೆ ಸಂಚರಿಸುವ ಬಹುತೇಕ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಸನ ಜಂಕ್ಷನ್‌ ರೈಲು ನಿಲ್ದಾಣ ಯಾರ್ಡ್‌ ಅನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ವ್ಯತ್ಯಯವಾಗಲಿದೆ.

ಈ ಸಮಯದಲ್ಲಿ ಹಾಸನ ಜಂಕ್ಷನ್‌ನ ಸಿಗ್ನಲಿಂಗ್‌, ಇಂಟರ್‌ಲಾಕ್ ಹಾಗೂ ವಿವಿಧ ಇಂಜಿನಿಯರಿಂಗ್‌ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯ ಅನುಮತಿ ನೀಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರದ್ದಾದ ರೈಲುಗಳ ಮಾಹಿತಿ: 

ಡಿಸೆಂಬರ್‌ 14ರಿಂದ 22ರವರೆಗೆ ರದ್ದಾದ ರೈಲುಗಳು
06214 ಮೈಸೂರು-ಅರಸೀಕೆರೆ
06213 ಅರಸೀಕೆರೆ – ಮೈಸೂರು
16207 ಯಶವಂತಪುರ-ಮೈಸೂರು
16208 ಮೈಸೂರು-ಯಶವಂತಪುರ
16222 ಮೈಸೂರು -ತಾಳಗುಪ್ಪ
06268 ಮೈಸೂರು-ಅರಸೀಕೆರೆ
06267 ಅರಸೀಕೆರೆ – ಮೈಸೂರು
06269 ಮೈಸೂರು -ಎಸ್ಎಂವಿಟಿ ಬೆಂಗಳೂರು

16221 ತಾಳಗುಪ್ಪ – ಮೈಸೂರು ( ಡಿಸೆಂಬರ್‌ 15 ರಿಂದ ಡಿಸೆಂಬರ್‌ 23ರವರೆಗೆ )

ಬೆಂಗಳೂರು- ಮಂಗಳೂರು- ಕಣ್ಣೂರು ಮಾರ್ಗವಾಗಿ ಸಂಚರಿಸಲಿರುವ ಮತ್ತು ರೈಲು ಸಂಖ್ಯೆ ರೈಲು ಸಂಖ್ಯೆ 16511 ಹಾಗೂ ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 16595 ಅನ್ನು ಡಿಸೆಂಬರ್ 16ರಿಂದ ಡಿಸೆಂಬರ್‌ 20ರವರೆಗೆ ರದ್ದು ಮಾಡಲಾಗಿದೆ.

ಕಣ್ಣೂರು- ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ರೈಲು ಸಂಖ್ಯೆ 16512 ಮತ್ತು ರೈಲು ಸಂಖ್ಯೆ ಕಾರವಾರ – ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ 16596 ಅನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದು ಮಾಡಲಾಗಿದೆ. ವಾರಕ್ಕೆ ಮೂರು ಬಾರಿ ಸಂಚರಿಸಲಿರುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ( ಯಶವಂತಪುರ – ಮಂಗಳೂರು 16575 ) ಅನ್ನು ಡಿಸೆಂಬರ್‌ 14, 17, 19 ಹಾಗೂ 21ರಂದು ರದ್ದು ಮಾಡಲಾಗಿದೆ. ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ 16576 ಅನ್ನು ಡಿಸೆಂಬರ್‌ 15, 18, 20 ಹಾಗೂ 22ರಂದು ರದ್ದುಗೊಳಿಸಲಾಗಿದೆ. ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 16515 ಅನ್ನು ಡಿಸೆಂಬರ್‌ 13, 15, 18, 20 ಹಾಗೂ 22ರಂದು ರದ್ದು ಮಾಡಲಾಗಿದೆ.

ಹಾಗೆಯೇ ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್‌ ರೈಲು 16516 ಅನ್ನು ಡಿಸೆಂಬರ್‌ 14, 16, 19, 21 ಹಾಗೂ 23ರಂದು ರದ್ದು ಮಾಡಲಾಗಿದೆ. ಡಿಸೆಂಬರ್‌ 16 ಹಾಗೂ 17ರಂದು ಯಶವಂತಪುರ – ಮಂಗಳೂರು ಸಾಪ್ತಾಹಿಕ ರೈಲನ್ನು ( 16539 / 16540 ) ರದ್ದು ಮಾಡಲಾಗಿದೆ.

ಯಾವ ರೈಲುಗಳು ಕೆಲಸ ನಿರ್ವಹಿಸಲಿವೆ?

ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಂಗಳೂರು – ಮುರಡೇಶ್ವರ – ಬೆಂಗಳೂರು ( 16585 / 16586 ) ರೈಲು ಕಾರ್ಯ ನಿರ್ವಹಿಸಲಿದ್ದು, ಇದು ಈ ಸಮಯದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಏಕೈಕ ರೈಲಾಗಿದೆ. ಈ ರೈಲು 

16585 ರೈಲು:  14.12.2023 to 16.12.2023ರವರೆಗೆ  ಬೆಂಗಳೂರು, ಯಶವಂತಪುರ ಬೈಪಾಸ್, ಚಿಕ್ಕಬಾಣಾವರ, ನೆಲ ಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಈ ಬದಲಾದ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ, ಹಾಸನ ಮಾರ್ಗದಲ್ಲಿ ಚಲಿಸಲಿದೆ.  

16586 ರೈಲು: 14.12.2023 to 16.12.2023ರವರೆಗೆ ಹಾಸನ, ಶ್ರವಣಬೆಳಗೊಳ, ನೆಲಮಂಗಲ, ಚಿಕ್ಕಬಾಣಾವರ, ಯಶ ವಂತಪುರ ಬೈಪಾಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಹಾಸನ, ಅರಸೀಕೆರೆ, ತುಮಕೂರು, ಯಶವಂತಪುರ ಬೈಪಾಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ. 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ