Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಈಗ ದೇಶದಲ್ಲಿ ರಾಜಾಡಳಿತ ಇಲ್ಲ: ಯದುವೀರ್‌ಗೆ ಟಾಂಗ್‌ ಕೊಟ್ಟ ಪ್ರತಾಪ್‌ ಸಿಂಹ!

ಮೈಸೂರು: ಸಂವಿಧಾನ ಜಾರಿಯಾದಾಗಿನಿಂದ ದೇಶದಲ್ಲಿ ರಾಜಾಡಳಿತ ಇಲ್ಲ. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ. ಯದುವೀರ್ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಿಎಂ ಹೇಳಿಕೆ ಹುಳುಕು ಅನ್ನಿಸುತ್ತಿಲ್ಲ. ಇದರಲ್ಲಿ ಹುಳುಕು ಹುಡುಕುತ್ತಿರುವುದು ತಪ್ಪು ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ರಾಜ ಯಾರು? ಎಂದು ನೀಡಿದ ಹೇಳಿಕೆಯನ್ನು ಸಂಸದ ಪ್ರತಾಪ್‌ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ಈಗ ದೇಶದಲ್ಲಿ ರಾಜಾಡಳಿತ ಇಲ್ಲ. ಖಾಸಗಿ ದರ್ಬಾರ್ ವೇಳೆ ಮಾತ್ರ ರಾಜರು ಅಲ್ಲಿಗೆ ಸೀಮಿತವಾಗಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ಆದರೆ ಯದುವೀರ್ ಬಗ್ಗೆ ನೀಡಿರುವ ಹೇಳಿಕೆ ವಿಚಾರದಲ್ಲಿ ನನ್ನ ಸಹಮತವಿದೆ ಎಂದಿದ್ದಾರೆ.

ಯದುವೀರ್‌ ಅವರನ್ನು ಈಗ ರಾಜ ಎಂದು ಕರೆಯುತ್ತಾರಾ ಇಲ್ಲಾ ಜನ ಪ್ರತಿನಿಧಿ ಎಂದು ಕರೆಯುತ್ತಾರಾ? ಎಂದು ಪ್ರಶ್ನಿಸಿದ ಸಿಂಹ ಜನ ಪ್ರತಿನಿಧಿಯಾಗಿ ರಾಜಕೀಯಕ್ಕೆ ಯದುವೀರ್‌ ಬಂದಿದ್ದು, ಸಿಎಂ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಪ್ರತಾಪ್‌ ಸಿಂಹ ವಿವರಿಸಿದರು.

ಎಂಪಿ ಅಭ್ಯರ್ಥಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ತು ವರ್ಷ ಅಧಿಕಾರ ನೀಡಿ, ಈಗ ಬದಲಾಯಿಸಿದ್ದೀರಿ ಇದನ್ನು ನಾನು ಒಪ್ಪುತ್ತೇನೆ. ಆದರೆ ಬೇರೆಯವರ ರೀತಿ ಟಿಕೆಟ್‌ ಮಿಸ್‌ ಆಯಿತು ಎಂದು ಪಾರ್ಕ್‌ನಲ್ಲಿ ಕುಳಿತು ತಮಟೆ ಬಾರಿಸಿಲ್ಲ ಎಂದು ರಾಮದಾಸ್‌ ಕಾಲೆಳೆದರು.

ಮುಂದುವರಿದು, ಮಹಾರಾಜರೇ ನೀವು ಕೈ ಮುಗಿದುಕೊಂಡು ಹೋಗಿ ಸಾಕು. ನಿಮ್ಮ ಎಂಪಿ ಹತ್ತು ವರ್ಷದಲ್ಲಿ ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಭೀವೃದ್ಧಿ ಕೆಲಸಕ್ಕೆ ಜನರು ಮತ ಹಾಕ್ತೀವಿ ಎಂದು ಹೇಳುತ್ತಾರೆ. ನೀವು ಗೆಲ್ಲಲ್ಲು ಯಾರ ನಾಮ ಬಲವೂ ಬೇಡ ಎಂದು ವೇದಿಕೆ ಮೇಲೆಯೇ ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದರು.

Tags: