ಬೆಂಗಳೂರು: ಉಗಾಂಡಾದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ಆಕೆಯನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕು ದೃಢೀಕರಣಕ್ಕಾಗಿ ಮಹಿಳೆಯ ರಕ್ತದ ಮಾದರಿಯನ್ನು ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬರುವವರೆಗೂ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮಹಿಳೆ ಸಂಪರ್ಕಕ್ಕೆ ಬಂದವರ ಮೇಲೂ ತೀವ್ರ ನಿಗಾ ಇಟ್ಟಿದೆ.
ಮಹಿಳೆ ಮೇ.23ರಂದು ಬೆಂಗಳೂರಿಗೆ ಆಗಮಿಸಿ ನಗರದ ಖಾಸಗಿ ಹೋಟೆಲ್‌ಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.





