Mysore
26
light rain

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಿಎಂ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ; ಸಚಿವ ಎಚ್‌.ಸಿ ಮಹದೇವಪ್ಪ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಆತ್ಮೀಯರಾಗಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಮುಖ್ಯಮಂತ್ರಿ ಅವರ ನಡುವೆ ಬಿನ್ನಾಭಿಪ್ರಾಯ ಇದೆ ಎಂಬುವುದು ಮಾಧ್ಯಮಗಳ ವದಂತಿ ಎಂದರು.

ಗಂಗಾಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ಸೇರಿಸಿ ಹೆಚ್ಚು ಹಣ ನೀಡಬೇಕೆಂಬುದು ಇಂಧನ ಸಚಿವ ಬೇಡಿಕೆಯಾಗಿದೆ. ಈ ಕುರಿತಂತೆ ಸಂಪುಟದಲ್ಲಿ ವಿಷಯಾಧಾರಿತ ಚರ್ಚೆ ನಡೆಯಿತು. ಯಾವುದೇ ವಾಗ್ವಾದ ಬಿನ್ನಾಭಿಪ್ರಾಯಗಳು ಇಲ್ಲ. ವಿದ್ಯುತ್ ಸಂಪರ್ಕಕ್ಕೆ 50 ಸಾವಿರಗಳಿಷ್ಟಿದ್ದ ವೆಚ್ಚವನ್ನು 75 ಸಾವಿರ ರೂ.ಗೆ ತಾವು ಹೆಚ್ಚಿಸಿದ್ದು ಮತ್ತಷ್ಟು ದರ ಹೆಚ್ಚಿಸಬೇಕೆಂದು ಇಂಧನ ಸಚಿವರ ವಾದವಾಗಿತ್ತು.

ನಗರ ಪ್ರದೇಶದಲ್ಲಿ 4.75 ಲಕ್ಷ, ಗ್ರಾಮೀಣ ಭಾಗದಲ್ಲಿ 3.75 ಲಕ್ಷಗಳನ್ನು ವಿದ್ಯುತ್ ಸಂಪರ್ಕಕ್ಕಾಗಿ ವೆಚ್ಚ ಮಾಡಲು ಎಸ್‍ಇಪಿಟಿಎಸ್‍ಪಿ ಯಡಿ ವೆಚ್ಚ ಮಾಡಲು ಅನುಮತಿಸಲಾಗಿದೆ. ಇದು ಸಾಲುವುದಿಲ್ಲ ಎಂಬುವುದು ಇಂಧನ ಇಲಾಖೆ ವಾದವಾಗಿದೆ. ಅದರ ಹೊರತು ಯಾವುದೇ ಸಂಘರ್ಷ ಇಲ್ಲ ಎಂದರು.

ಇದನ್ನು ಓದಿ: ದೇಶ ಪ್ರೇಮದ ಢೋಂಗಿ ಭಾಷಣ ಮಾಡುವ RSS, BJP : ಸಿಎಂ ಸಿದ್ದರಾಮಯ್ಯ ಟೀಕೆ 

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ತಮ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈಗ ಇಲ್ಲ ಸಲ್ಲದ ಟೀಕೆ ಮಾಡುತ್ತಿರುವ ಗೋವಿಂದ್ ಕಾರಜೋಳ ಸಮಾಜ ಕಲ್ಯಾಣ ಸಚಿವರಾಗಿದ್ದರು. ಎಚ್. ಆಂಜನೇಯ ಕೂಡ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದರು. ಕೇಂದ್ರದಲ್ಲಿ ಎ. ನಾರಾಯಣಸ್ವಾಮಿ ಸಚಿವರಾಗಿದ್ದಾಗ ಒಳ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿ ಕೊಡಬೇಡಿ ಎಂದು ಅವರಿಗೆ ಯಾರು ಅಡ್ಡಿ ಪಡಿಸಿದ್ದರು. ರಾಜಕೀಯಕ್ಕಾಗಿ ಈಗ ಟೀಕೆ ಮಾಡುತ್ತಿದ್ದಾರೆ. ಅದೇನೂ ಬದನೆಕಾಯಿ ಅಲ್ಲ, ಕಿತ್ತುಕೊಡಲು ಸಂವಿಧಾನಿಕ ಹಕ್ಕು. ಅದನ್ನು ಕಾನೂನು ಬದ್ಧವಾಗಿಯೇ ಜಾರಿಗೊಳಿಸಬೇಕು ಎಂದು ಹೇಳಿದರು.

ಅಧಿಕಾರ ಹಂಚಿಕೆಯ ಬಗ್ಗೆ ನವೆಂಬರ್ 25ಕ್ಕೆ ಡಿ.ಕೆ.ಶಿವಕುಮಾರ್ ಗಡುವು ನೀಡಿದ್ದಾರೆ ಎಂಬುವುದು ನಮಗೆ ತಿಳಿದಿಲ್ಲ. ಅದು ದೊಡ್ಡವರ ಹಂತದಲ್ಲಿ ನಿರ್ಧಾರವಾಗಬೇಕು ಎಂದರು.

ದಲಿತ ಮುಖ್ಯಮಂತ್ರಿಯ ಹುದ್ದೆಯ ಬೇಡಿಕೆ ಸದಾ ಇದ್ದೇ ಇರುತ್ತದೆ. ಈ ಕುರಿತ ಹೋರಾಟ ನಿರಂತರ. ಆದರೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ದಲಿತರಿಗೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಸೂಕ್ತ ಸಮಯ ಬರಬೇಕು ಎಂದು ಹೇಳಿದರು.

Tags:
error: Content is protected !!