ಕಾರವಾರ: ಪತ್ನಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ನಿರ್ಮಾಪಕ ಹರ್ಷವರ್ಧನ್ ಇದೀಗ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸರು ನಿರ್ಮಾಪಕ ಹರ್ಷವರ್ಧನ್‌ನನ್ನು ಬಂಧಿಸಿದ್ದಾರೆ.
ಕಳೆದ 2017ರಲ್ಲಿ ಸಿದ್ದಾಪುರದ ಹಲಗೇರಿ ಬಳಿಕ ಕುಂಬಾರಕುಳಿ ಎಂಬಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ: ಮಕ್ಕಳ ವೈದ್ಯೆ ಕಿಡ್ನಾಪ್: 6 ಕೋಟಿ ರೂ.ಗೆ ಬೇಡಿಕೆ
ಈ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಹರ್ಷವರ್ಧನ್ ಜಾಮೀನು ಮೇಲೆ ಹೊರಬಂದಿದ್ದ. ಕೋರ್ಟ್‌ನಿಂದ 10 ಬಾರಿ ವಾರೆಂಟ್ ಜಾರಿಯಾದರೂ ವಿಚಾರಣೆಗೆ ಹಾಜರಾಗದೇ ಓಡಾಡುತ್ತಿದ್ದ.
ಈ ಹಿನ್ನೆಲೆಯಲ್ಲಿ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿತ್ತು. ಈ ನಿಟ್ಟಿನಲ್ಲಿ ಸಿದ್ದಾಪುರ ಪೊಲೀಸರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಬಂಧಿಸಿದ್ದಾರೆ.





