ಬೆಂಗಳೂರು: ಕೊಟ್ಟ ಅವಧಿಯಲ್ಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ಕೊಟ್ಟ ಅವಧಿಯಲ್ಲೇ ಸಮೀಕ್ಷೆ ಮುಗಿಸುತ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕೊಟ್ಟ ಅವಧಿಯಲ್ಲಿ ಸಮೀಕ್ಷೆ ಕಾರ್ಯ ಮುಗಿಸುತ್ತೇವೆ. ಸಣ್ಣ-ಪುಟ್ಟ ಗೊಂದಲ ಇದ್ದೇ ಇರುತ್ತದೆ. ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹೈಕೋರ್ಟ್ ಆದೇಶ ಏನು ಬರುತ್ತದೆ ಎಂಬುದನ್ನು ಕಾದುನೋಡೋಣ. ಕಾನೂನು ಪಾಲನೆ ಮಾಡೋದು ನಮ್ಮ ಕರ್ತವ್ಯ. ಅಕ್ಟೋಬರ್.7ರವರೆಗೆ ನೋಡೋಣ. ಮುಂದೆ ವಿಸ್ತರಿಸುವ ಬಗ್ಗೆಯೂ ಯೋಚನೆ ಮಾಡೋಣ ಎಂದರು.
ಇದನ್ನು ಓದಿ : ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ | ವಿಚಾರಣೆ ಬುಧವಾರಕ್ಕೆ ಮುಂದೂಡಿದ ಹೈಕೋರ್ಟ್
ಇನ್ನು ಮುಂದುವರಿದು ಮಾತನಾಡಿದ ಅವರು, ಒಕ್ಕಲಿಗೆ ಲಿಂಗಾಯರ ಮುಖಂಡರು ಎಐಸಿಸಿ ಅಧ್ಯಕ್ಷ ಮಲಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಹೈಕಮಾಂಡ್ ನಾಯಕರು ಏನಾದರೂ ಇದ್ದರೆ ಸಿಎಂಗೆ ಹೇಳುತ್ತಾರೆ ಎಂದು ಹೇಳಿದರು.





