Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಆರ್.‌ಅಶೋಕ್‌ ವಾಗ್ದಾಳಿ

The Chief Minister himself is the brand ambassador of fake news: Opposition Leader R. Ashoka

ಬೆಂಗಳೂರು: ಸಚಿವರು ಹಾಗೂ ಶಾಸಕರು ಸಿಎಂ ಮನೆಯಲ್ಲಿ ಬ್ರೇಕ್‌ ಫಾಸ್ಟ್‌ ಮಾಡುತ್ತಿದ್ದು, ಡಿಸಿಎಂ ಮನೆಯಲ್ಲಿ ಡಿನ್ನರ್‌ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರನ ಸಾಮಾಜಿಕ ಕಾಳಜಿ 

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಆದರೂ ಒಬ್ಬನೇ ಒಬ್ಬ ಸಚಿವರು, ಶಾಸಕರು ತೆರಳಿ ರೈತರ ಸಮಸ್ಯೆ ಆಲಿಸಿಲ್ಲ. ಬೆಳೆಗೆ ಪರಿಹಾರವನ್ನೂ ನೀಡಿಲ್ಲ. ಜಲಸಂಪನ್ಮೂಲ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಧಿಕಾರಕ್ಕಾಗಿ ತಮ್ಮ ಹೊಲಗಳಿಗೆ ನೀರು ಹರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ದೆಹಲಿ ಟೂರ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಸಚಿವರು, ಶಾಸಕರು ಸಿಎಂ ನಿವಾಸದಲ್ಲೇ ಬ್ರೇಕ್‌ ಫಾಸ್ಟ್, ಡಿಸಿಎಂ ಮನೆಯಲ್ಲಿ ಡಿನ್ನರ್‌ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನರ ಬಗ್ಗೆಯಾಗಲಿ, ರೈತರ ಬಗ್ಗೆಯಾಗಲಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!