ಬೆಂಗಳೂರು: ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಕರುನಾಡನ್ನು ಕ್ರೈಂ ಸ್ಟೇಟ್ ಆಫ್ ಕರ್ನಾಟಕವಾಗಿ ಬದಲಾಯಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು ರಾಜ್ಯದಲ್ಲಿ ಒಂದೇ ವಾರದಲ್ಲಿ ನಡೆದ ಭಯಾನಕ ಕೃತ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.
ಒಂದೇ ವಾರದಲ್ಲಿ ನಡೆದ ಭಯಾನಕ ಕೃತ್ಯಗಳ ಪಟ್ಟಿ:
೧) ಚಾಮರಾಜಪೇಟೆಯಲ್ಲಿ ಹಸುಗಳ ಮೇಲೆ ವಿಕೃತಿ
೨) ಬೀದರ್‌ನಲ್ಲಿ ಹಾಡಹಗಲೇ ಎಟಿಎಂ ದರೋಡೆ
೩) ಮಂಗಳೂರಿನಲ್ಲಿ ಭಯಾನಕ ಬ್ಯಾಂಕ್ ರಾಬರಿ
೪) ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್ ದರೋಡೆ ಯತ್ನ
೫) ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ದರೋಡೆ
೬) ಹೊನ್ನಾವರದಲ್ಲಿ ಹಸುವಿನ ಹೊಟ್ಟೆ ಬಗೆದು ಕೃತ್ಯ
೭) ವಿಜಯಪುರದಲ್ಲಿ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ
೮) ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ಮಹಿಳೆ ಮೇಲೆ ರೇಪ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಕ್ರೈಂ ತಂದಿದೆ, ಅರಾಜಕತೆ ಸೃಷ್ಟಿಸಿದೆ. ಏನಾಗ್ತಿದೆ ರಾಜ್ಯದಲ್ಲಿ? ರಾಜ್ಯ ಪೊಲೀಸ್ ಇಲಾಖೆ ಏನ್ಮಾಡ್ತಿದೆ? ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್ ಅವರೇ, ಮೊದಲು ರಾಜೀನಾಮೆ ನೀಡಿ ಎಂದು ಟ್ವೀಟ್‌ನಲ್ಲಿ ಆಗ್ರಹಿಸಿದೆ.