ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ 17 ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಬೆಂಗಳೂರಿನ ಕಾಪಾಕ್ಷಿಪಾಳ್ಯ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಇಂದು(ಜೂ.12) ಬಂಧಿತ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿದೆ. ರೇಣುಕಾಸ್ವಾಮಿ ಮೃತದೇಹ ಬಿಸಾಡಿದ ಸ್ಥಳ, ಹಲ್ಲೆ ಮಾಡಿದ ಸ್ಥಳಗಳಿಗೆ ಕರೆದೊಯ್ದು ಆರೋಪಿಗಳನ್ನು ಮಹಜರು ಮಾಡಲಾಗುತ್ತಿದೆ.
ಇನ್ನೂ ಪೊಲೀಸರು ಸ್ಥಳದಲ್ಲಿ ಸಿಕ್ಕಂತಹ ಪರಿಕರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಕೃತ್ಯಕ್ಕೆ ಬಳಸಿದಿ ಆಯುಧಗಳನ್ನು ಕೂಡ ಪೋಲಿಸರು ವಶಪಡಿಸಿಕೊಂಡಿದ್ದಾರೆ.
ನಟ ದರ್ಶನ್ ಅಭಿಮಾನಿ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿ, ಶವವನ್ನು ಕಾಲುವೆಗೆ ಬಿಸಾಡಲಾಗಿತ್ತು. ಈ ಬಗ್ಗೆ ಭಾನುವಾರ ದಾಖಲಾದ ಈ ಪ್ರಕರಣವು ನಟ ದರ್ಶನ್ ಅವರನ್ನೇ ಸುತ್ತುಕೊಂಡಿದೆ. ಈ ಪ್ರಕರಣದಲ್ಲಿ ದರ್ಶನ್ ಎ2ಆರೋಪಿಯಾಗಿದ್ದು, ಅವರ ಆಪ್ತೆ ಪವಿತ್ರಾಗೌಡ ಎ1 ಆರೋಪಿಯಾಗಿದ್ದಾರೆ.





