ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಸತತ ಮೂರನೇ ಬಾರಿ ಮೈಸೂರಿಗೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ.
ನಟ ದರ್ಶನ್ ಮೈಸೂರಿಗೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು(ಜನವರಿ.31) ವಿಚಾರಣೆ ನಡೆಸಿದ ನ್ಯಾಯಪೀಠವೂ ಫೆಬ್ರವರಿ.10 ವರೆಗೂ ಮೈಸೂರಿನಲ್ಲಿ ವಾಸ್ತವ್ಯದಲ್ಲಿರಲು ದರ್ಶನ್‌ಗೆ ಅನುಮತಿ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧಿಯಾಗಿದ್ದ ನಟ ದರ್ಶನ್‌ಗೆ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿತ್ತು. ಬಳಿಕ ದರ್ಶನ್ ಅವರು ಮೈಸೂರಿನ ತಮ್ಮ ತೋಟದ ಮನೆಗೆ ತೆರಳಲು ಎರಡು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಅನ್ವಯ ದರ್ಶನ್‌ಗೆ ಎರಡು ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲು ಅನುಮತಿ ನೀಡಿತ್ತು. ಆದರೆ ದರ್ಶನ್ ಮೂರನೇ ಬಾರಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೀಗ ಫೆಬ್ರವರಿ 10ರವರೆಗೂ ಮೈಸೂರಿನಲ್ಲಿರಲು ಅವಕಾಶ ನೀಡಿದೆ.