Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಕಾವೇರಿ ವಿವಾದ ; ನಾಳೆ ಸರ್ವಪಕ್ಷಗಳ ಸಭೆ ಕರೆದ ತಮಿಳುನಾಡು

ಬೆಂಗಳೂರು : ತಮಿಳುನಾಡಿಗೆ ನಿತ್ಯ ೧ ಟಿಎಂಸಿ ನೀರು ಬಿಡಲು ಕರ್ನಾಟಕ ಒಪ್ಪದ ಹಿನ್ನೆಲೆ ನಾಳೆ ತಮಿಳುನಾಡು ಜಲಸಂಪನ್ಮೂಲ ಸಚಿವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಕಾವೇರಿ  ನೀರು ನಿರ್ವಹಣಾ ಪ್ರಾಧಿಕಾರ ಜುಲೈ ೧೨ ರಿಂದ ೩೧ ರವರೆಗೆ ತಮಿಳುನಾಡಿಗೆ ನಿತ್ಯ ೧ ಟಿಎಂಸಿ ನೀರು ಬಿಡುವಂತೆ ಸೂಚನೆ ನೀಡಿತ್ತು. ಆದ್ರೆ ನಮ್ಮ ಕರ್ನಾಟಕ ಸರ್ಕಾರ ಇದನ್ನ ತಿರಸ್ಕರಿಸಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಿ ಪ್ರತಿ ದಿನ ೧ ಟಿಎಂಸಿ ನೀರು ಬಿಡೋದಿಕ್ಕೆ ಆಗಲ್ಲ ಎಂದು CWRC ಶಿಫಾರಸ್ಸು ಒಪ್ಪಲು ಸಾಧ್ಯವಿಲ್ಲ ಎಂದಿತು.

ಕರ್ನಾಟಕದ ನಿರ್ಧಾರದ ಬೆನ್ನಲ್ಲೆ ನಾಳೆ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್‌ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.

ಜುಲೈ ೧೧ ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ೩ನೇ ಸಭೆ ನಡೆಸಿ ಜುಲೈ ೧೨ ರಂದು ಈ ತಿಂಗಳ ಕೊನೆಯವರೆಗೂ ಸುಮಾರು ೨೦ ದಿನ ಪ್ರತಿ ದಿನ ೧ ಟಿಎಂಸಿ ನೀರು ಬಿಡಲು ಆದೇಶಿಸಿತ್ತು. ನಾರ್ಮಲ್‌ ವರ್ಷದಲ್ಲಿ ಜೂನ್‌ ತಿಂಗಳಲ್ಲಿ ೯.೪ ಟಿಎಂಸಿ , ಜುಲೈ ನಲ್ಲಿ ೩೧.೨೪ ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು ೪೦.೪೩ ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ ೫ ಟಿಎಂಸಿ ಗೂ ನೀರು ಬಿಡಲು ಸಾಧ್ಯವಾಗಿದೆ.

Tags:
error: Content is protected !!