Mysore
17
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಸೂರಜ್‌ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಸೂರಜ್‌ ಪರ ವಕೀಲ ಹೇಳಿದ್ದಿಷ್ಟು

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಎಂಎಲ್‌ಸಿ ಡಾ.ಸೂರಜ್‌ ರೇವಣ್ಣರನ್ನು ಕಸ್ಟಡಿಗೆ ಪಡೆಯಲು ನಾಳೆ ಸಿಐಡಿ ಅಧಿಕಾರಿಗಳು ಅರ್ಜಿ ಹಾಕುತ್ತಾರೆ ಎಂದು ಸೂರಜ್‌ ಪರ ವಕೀಲ ನಿಖಿಲ್‌ ಕಾಮತ್‌ ಹೇಳಿದ್ದಾರೆ.

ಇಂದು ಹಾಸನದ ಹಿಮ್ಸ್‌ನಲ್ಲಿ ಮೆಡಿಕಲ್‌ ಟೆಸ್ಟ್‌ಗೆ ಒಳಪಡಿಸಿದ ನಂತರ ಸೂರಜ್‌ ರೇವಣ್ಣನನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್‌ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಸೂರಜ್‌ ರೇವಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸೂರಜ್‌ ರೇವಣ್ಣ ಪರ ವಕೀಲ ನಿಖಿಲ್‌ ಕಾಮತ್‌ ಅವರು ಸೂರಜ್‌ ರೇವಣ್ಣರನ್ನು ಜಡ್ಜ್‌ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಕೇಸ್‌ ಫೈಲ್ ಇನ್ನೂ ಕೈ ಸೇರಿಲ್ಲ. ನಾಳೆ ಸಿಐಡಿ ಅಧಿಕಾರಿಗಳು ಸೂರಜ್‌ ರೇವಣ್ಣರನ್ನು ಕಸ್ಟಡಿಗೆ ಪಡೆಯಲು ಓಪನ್‌ ಕೋರ್ಟ್‌ಗೆ ಅರ್ಜಿ ಹಾಕುತ್ತಾರೆ ಎಂದು ಪ್ರಕರಣದ ಮಾಹಿತಿ ನೀಡಿದರು.

Tags:
error: Content is protected !!