Mysore
24
mist

Social Media

ಶುಕ್ರವಾರ, 14 ನವೆಂಬರ್ 2025
Light
Dark

ಡಿಕೆಶಿ ಸಿಎಂ ಆದ್ರೆ ಜೆಡಿಎಸ್ ಶಾಸಕರ ಬೆಂಬಲ : ಎಚ್‌.ಡಿ ಕುಮಾರಸ್ವಾಮಿ

ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಯ ಬಹಿರಂಗ ಹೇಳಿಕೆಗಳು ಜೋರಾದ ಮೇಲೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಚಿವರು, ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರು ಸಖತ್ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್‌.ಡಿ ಕುಮಾರಸ್ವಾಮಿ ಅವರು ನಾಳೆ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಸಿಎಂ ಆದರೆ ಜೆಡಿಎಸ್​ನ 19 ಶಾಸಕರೂ ಬೆಂಬಲ ಕೊಡುತ್ತೇವೆ. ಡಿಕೆ ಶಿವಕುಮಾರ್ ಅವರು ಬೇಕಿದ್ರೆ ಸಿಎಂ ಆಗಲಿ. ನಾವೂ ಸಹ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ಘೋಷಣೆ ಮಾಡಿದರು.

ಸುದ್ದಿಗಾರರೊಂದಿಗೆ ವ್ಯಂಗ್ಯವಾಗೇ ಮಾತನಾಡಿರುವ ಎಚ್‌.ಡಿ ಕುಮಾರಸ್ವಾಮಿ ಅವರು ನಾನ್ಯಾಕೆ ಅವರಿಗೆ ಅಡ್ಡಿಯಾಗಲಿ. ನಮ್ಮ ಎಂಎಲ್‌ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತ ಅರ್ಜಿ ಹಾಕಿ ಕರೆಯುತ್ತಿದ್ದಾರೆ. ಯಾಕೆ ಸುಮ್ನೆ ಜೆಡಿಎಸ್‌ ನಾಯಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಲು ಕರೆಯುತ್ತಿದ್ದಾರೆ. ನನಗೇನೂ ವೈರತ್ವ ಇಲ್ಲ ನಾವೇ ಡಿ.ಕೆ ಶಿವಕುಮಾರ್ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಸಿಎಂ ಆಗಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!