Mysore
28
clear sky

Social Media

ಬುಧವಾರ, 28 ಜನವರಿ 2026
Light
Dark

ಜೈಲಿನಲ್ಲಿ ಕಠಿಣ ನಿಯಮ ಜಾರಿ : ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ 

Darshan

ಬೆಂಗಳೂರು : ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇನ್ನಷ್ಟು ಕಷ್ಟಪಡಬೇಕಾದ ಸಂದರ್ಭ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಅವರು ಕನಿಷ್ಟ ಸೌಲಭ್ಯಗಳಿಗಾಗಿ ಮತ್ತೆ ಪರದಾಡಬೇಕಾಗಿದೆ. ಈ ಮೊದಲು ಅವರಿಗೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈಗ ಅದನ್ನು ಕೂಡ ನಿರಾಕರಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ನಡೆದಿರುವುದು ಪದೇಪದೇ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಜೈಲು ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಜೈಲಿನಲ್ಲಿ ಬದಲಾವಣೆ ತರಲು ಅಂಶು ಕುಮಾರ್ ಅವರು ಮುಂದಾಗಿದ್ದಾರೆ. ಪ್ರತಿ ದಿನ ಐಪಿಎಸ್ ಅಧಿಕಾರಿಯಿಂದ ಜೈಲಿನಲ್ಲಿ ಮಾನಿಟರಿಂಗ್ ಮಾಡಲಾಗುತ್ತಿದೆ. ಸಿಬ್ಬಂದಿಗಳಿಂದ ಪ್ರತಿದಿನ ಜೈಲಿನಲ್ಲಿ ತಪಾಸಣೆ ನಡೆಯುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರು ಜೈಲಿನೊಳಗೆ ಮೊಬೈಲ್ ಪತ್ತೆ ಆಗುತ್ತಲೇ ಇದೆ. ಮೊಬೈಲ್ ಫೋನ್ಗಳಿಗೆ ಕಡಿವಾಣ ಹಾಕಲು ಐಪಿಎಸ್ ಅಧಿಕಾರಿ ಹರಸಾಹಸ ಮಾಡುತ್ತಿದ್ದಾರೆ. ಜೈಲಿನಲ್ಲಿ ಮೊಬೈಲ್ ಸಿಗುತ್ತಿದ್ದಂತೆಯೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಸಾಲು ಸಾಲು ಕೇಸ್ ದಾಖಲಾಗುತ್ತಿವೆ. ಅಂಶು ಕುಮಾರ್ ಅವರ ಕಠಿಣ ಕ್ರಮದಿಂದ ದರ್ಶನ್ ಅವರಿಗೂ ಸಂಕಷ್ಟ ಶುರುವಾಗಿದೆ.

ಸದ್ಯಕ್ಕೆ ದರ್ಶನ್ ಅವರಿಗೆ ವಾಕಿಂಗ್ ಮಾಡಲು ಅವಕಾಶ ಇಲ್ಲ. ರೂಮಿಗೆ ಬರುತ್ತಿದ್ದ ಊಟ, ತಿಂಡಿ ಕೂಡ ಬಂದ್ ಆಗಿದೆ. ದರ್ಶನ್ ಈಗ ತಾವೇ ಹೋಗಿ ಊಟ, ತಿಂಡಿ ತರಬೇಕಿದೆ. ಈ ಮೊದಲು ಜೈಲಿನ ಸಿಬ್ಬಂದಿಯೇ ದರ್ಶನ್ ಕೊಠಡಿಗೆ ಊಟ, ತಿಂಡಿ ತಂದು ಕೊಡುತ್ತಿದ್ದರು. ಈಗ ಅದನ್ನು ಬಂದ್ ಮಾಡಲಾಗಿದೆ.

Tags:
error: Content is protected !!