Mysore
30
few clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಮೆಕ್ಕೆಜೋಳಕ್ಕೆ 2400 ರೂ ನಿಗದಿ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಡಿಸ್ಟಿಲರಿಗಳು ಖರೀದಿಸು ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 2400ರೂ ನಿಗದಿ ಮಾಡಲಾಗಿದೆ.

ಮೆಕ್ಕೆಜೋಳ ಸೇರಿದಂತೆ ಧಾನ್ಯ ಆಧಾರಿತ ಎಥೆನಾಲ್‌ ಉತ್ಪಾದಿಸುವ ಡಿಸ್ಟಿಲರಿಗಳು ನಾಫೆಡ್‌ ಬದಲಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮೂಲಕ ರೈತರಿಂದ ಪ್ರತಿ ಕ್ವಿಂಟಲ್‌ಗೆ 2400 ರೂ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇದನ್ನು ಓದಿ:  ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಗುಡ್‌ನ್ಯೂಸ್:‌ ಸಿಎಂ ಸಿದ್ದರಾಮಯ್ಯ ಘೋಷಣೆ

ಕೇಂದ್ರ ಸರ್ಕಾರವು ಡಿಸ್ಟಿಲರಿಗಳು ಖರೀದಿಸಬೇಕಾಗಿರುವ ಮೆಕ್ಕೆಜೋಳದ ಬಗ್ಗೆ ಎಸ್‌ಒಪಿ ಬಿಡುಗಡೆ ಮಾಡಿದೆ. ಅದರಲ್ಲಿ ಎನ್‌ಸಿಸಿಎಫ್‌ ಹಾಗೂ ನಾಫೆಡ್‌ ಮೂಲಕ ಪ್ರತಿ ಕ್ವಿಂಟಾಲ್‌ಗೆ 2639 ರೂ ದರ ನಿಗದಿಯಾಗಿದೆ.

ಆದರೆ ಮಾರುಕಟ್ಟೆಯಲ್ಲಿ 1600 ರಿಂದ 1900 ರೂ ಧಾರಣೆ ಇದೆ. ಹೀಗಾಗಿ 2639 ರೂಗೆ ಖರೀದಿ ಮಾಡಿದರೆ ಸಮಸ್ಯೆ ಆಗುತ್ತದೆ ಎಂದು ಡಿಸ್ಟಿಲರಿ ಮಾಲೀಕರು ಸರ್ಕಾರಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ 2400 ರೂಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

Tags:
error: Content is protected !!