Mysore
36
few clouds

Social Media

ಗುರುವಾರ, 23 ಏಪ್ರಿಲ 2026
Light
Dark

SSLC RESULTS | ಈ ಬಾರಿಯೂ ಬಾಲಕಿಯರೇ ಮೇಲುಗೈ, ಶೇ.96.18 ವಿದ್ಯಾರ್ಥಿನಿಯರ್‌ ಪಾಸ್‌

sslc result

ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದ್ದು, ಈ ಬಾರಿಯೂ ಎಸ್​ಎಸ್​ಎಲ್​ಸಿಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಲಕಿಯರೇ ಮೇಲುಗೈ
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದರಲ್ಲಿ 91.94 ರಷ್ಟು ಬಾಲಕರು ಉತೀರ್ಣರಾಗಿದ್ರೆ, 96.18 ವಿದ್ಯಾರ್ಥಿನಿಯರು ತೇರ್ಗಡೆಯಾಗುವ ಮೂಲಕ ದಾಖಲೆ ಫಲಿತಾಂಶ ನೀಡಿದ್ದಾರೆ.

7ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೂರ್ಣ ಅಂಕ
ಚಿಕ್ಕೋಡಿಯ ಪ್ರಾರ್ಥನಾ, ದಾವಣಗೆರೆಯ ಭರತ್‌, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರಿನ ಧನುಷ್‌, ಉಡುಪಿಯ ಪ್ರೀತಮ್‌ ಪೂಜಾರಿ, ವಿಜಯಪುರದ ಸೌಜನ್ಯ, ರಾಯಯಚೂರಿನ ಸುಖದೇವ್‌ ಹಾಗೂ ಇನ್ನೂ ಕೆಲವರು ಪೂರ್ಣ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ – 1 ರ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಮತ್ತು ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಪಡೆಯಬಹುದಾಗಿದೆ.

ಡಿಜಿಲಾಕರ್​ನಲ್ಲಿ ಅಂಕಪಟ್ಟಿ
ದ್ವಿತೀಯ ಪಿಯುಸಿಯಂತೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೂ ಸಹ ಡಿಜಿಲಾಕರ್​ನಲ್ಲಿ ಅಂಕಪಟ್ಟಿಗಳು ಲಭ್ಯವಾಗುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಡಿದೆ. ವಿದ್ಯಾರ್ಥಿಗಳು https://digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Tags:
error: Content is protected !!