Mysore
28
overcast clouds

Social Media

ಮಂಗಳವಾರ, 03 ನವೆಂಬರ್ 2026
Light
Dark

ಹಸಗೂಲಿಯಲ್ಲಿ ಸರಣಿ ಕಳ್ಳತನ: 500 ಮೀಟರ್‌ಗೂ ಹೆಚ್ಚು ಮೋಟಾರ್ ಕೇಬಲ್ ಕಳವು

ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಸರಣಿ ಕಳ್ಳತನದಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗ್ರಾಮದ ಹಲವು ಜಮೀನುಗಳಲ್ಲಿ ಹತ್ತಕ್ಕೂ ಹೆಚ್ಚು ಮೋಟಾರ್‌ಗಳ ಕೇಬಲ್‌ಗಳನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ಒಟ್ಟು 500 ಮೀಟರ್‌ಗೂ ಹೆಚ್ಚು ಕೇಬಲ್ ಕಳುವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಜಮೀನಿನಲ್ಲಿದ್ದ ಮನೆಯೊಂದರ ಬಾಗಿಲು ಮುರಿದ ಕಳ್ಳರು, ಒಳಗಿದ್ದ ಕೇಬಲ್ ತಂತಿ ಹಾಗೂ ಸುಮಾರು ಐದರಿಂದ ಆರು ಸಾವಿರ ರೂಪಾಯಿ ನಗದನ್ನೂ ಕದ್ದೊಯ್ದಿದ್ದಾರೆ ಎಂದು ರೈತರು ಹೇಳಿದ್ದಾರೆ.

ಬರಗಾಲದಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಈಗ ಮೋಟಾರ್ ಕೇಬಲ್‌ಗಳೂ ಕಳವಾಗಿರುವುದರಿಂದ ಬೆಳೆಗಳಿಗೆ ನೀರು ಹಾಯಿಸುವುದು ಮತ್ತಷ್ಟು ಕಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಜಮೀನುಗಳಲ್ಲಿ ಕೇಬಲ್ ಕಳ್ಳತನ ಹೆಚ್ಚುತ್ತಿದ್ದರೂ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಹಸಗೂಲಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:
error: Content is protected !!