Mysore
20
overcast clouds
Light
Dark

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿದೆ ಜಿಲ್ಲಾವಾರು ಪಟ್ಟಿ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.73.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.

ರಾಜ್ಯಾದ್ಯಂತ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 2,87,416 ಬಾಲಕರು, 3,42,788 ಬಾಲಕೀಯರು ಉತ್ತೀರ್ಣರಾಗಿದ್ದಾರೆ.ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ದ್ವಿತೀಯ ಹಾಗೂ ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. ಇನ್ನು ಯಾವ ಜಿಲ್ಲೆಗಳ ಫಲಿತಾಂಶ ಎಷ್ಟಾಗಿದೆ? ಜಿಲ್ಲಾವಾರು ಫಲಿತಾಂಶದ ವಿವರ ನಿಮಗೆಂದೇ ಇಲ್ಲಿದೆ.

ಜಿಲ್ಲಾವಾರು ಫಲಿತಾಂಶ (ಶೇಕಡಾವಾರು)
1. ಉಡುಪಿ – 94
2. ದಕ್ಷಿಣ ಕನ್ನಡ – 92.12
3. ಶಿವಮೊಗ್ಗ – 88.67
4. ಕೊಡಗು – 88.67
5. ಉತ್ತರ ಕನ್ನಡ – 86.54
6. ಹಾಸನ – 86.28
7. ಮೈಸೂರು -85.5
8. ಶಿರಸಿ – 84.64
9. ಬೆಂಗಳೂರು ಗ್ರಾಮಾಂತರ – 83.67
10. ಚಿಕ್ಕಮಗಳೂರು – 83.39
11. ವಿಜಯಪುರ – 79.82
12. ಬೆಂಗಳೂರು ದಕ್ಷಿಣ – 79
13. ಬಾಗಲಕೋಟೆ – 77.92
14. ಬೆಂಗಳೂರು ಉತ್ತರ – 77.09
15. ಹಾವೇರಿ – 75.89
16. ತುಮಕೂರು – 75.16
17. ಗದಗ – 74.76
18. ಚಿಕ್ಕಬಳ್ಳಾಪುರ – 73.61
19. ಮಂಡ್ಯ – 73.59
20. ಕೋಲಾರ -73.57
21. ಚಿತ್ರದುರ್ಗ – 72.85
22. ಧಾರವಾಡ – 72.67
23. ದಾವಣಗೆರೆ – 72.49
24. ಚಾಮರಾಜನಗರ – 71.59
25. ಚಿಕ್ಕೋಡಿ -69.82
26. ರಾಮನಗರ – 69.53
27. ವಿಜಯನಗರ – 65.61
28. ಬಳ್ಳಾರಿ – 64.99
29. ಬೆಳವಾಗಿ – 64.93
30. ಮಧುಗಿರಿ – 62.44
31. ರಾಯಚೂರು – 61.2
32. ಕೊಪ್ಪಳ – 61.16
33. ಬೀದರ್‌ – 57.52
34. ಕಲಬುರಗಿ – 53.04
35. ಯಾದಗಿರಿ – 50.59