Mysore
25
overcast clouds
Light
Dark

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಈ ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ನೋಡಿ

ಬೆಂಗಳೂರು: ರಾಜ್ಯಾದ್ಯಂತ ಇದೇ ಮಾರ್ಚ 25ರಿಂದ ಏಪ್ರಿಲ್‌ 6ವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ನಾಳೆ (ಮೇ.9) ಬೆಳಿಗ್ಗೆ 10.30ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಾದ ಎನ್‌. ಮಂಜುಶ್ರೀ ಪತ್ರಿಕಾಗೋಷ್ಠಿ ನಡೆಸಿ ಪರೀಕ್ಷಾ ಫಲಿತಾಂಶದ ಮಾಹಿತಿ ನೀಡಲಿದ್ದಾರೆ.

ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 4,41,910 ಬಾಲಕರು ಮತ್ತು 4,28,058 ಮಂದಿ ಬಾಲಕೀಯರು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ನಾಳೆ ಪ್ರಕಟಗೊಳ್ಳಲಿದೆ.

ಈ ವೆಬ್‌ಸೈಟ್‌ ಮೂಲಕ ನಿಮ್ಮ ರಿಸಲ್ಟ್‌ ನೋಡಿ: ನಾಳೆ ಬೆಳಿಗ್ಗೆ ಪತ್ರಿಕಾಗೋಷ್ಠಿ ನಂತರ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಅಥವಾ karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ರಿಜಿಸ್ಟರ್‌ ನಂಬರ್‌ ಹಾಗೂ ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ವಿದ್ಯಾರ್ಥಿಗಳು ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ.

ಅನುತ್ತೀರ್ಣರಾದರೇ ಭಯಪಡಬೇಕಿಲ್ಲಾ: ನಾಳೆ ಫಲಿತಾಂಶದಿಂದ ಅನುತ್ತೀರ್ಣರಾದರೇ ಮತ್ತೇನು ಮಾಡಬೇಕು ಎಂದು ವಿದ್ಯಾರ್ಥಿಗಳಾರು ಚಿಂತೆ ಮಾಡಬೇಕಿಲ್ಲ. ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೂರು ಬಾರಿ ಬರೆಯಬಹುದಾಗಿದೆ. ಮೊದಲೆಲ್ಲಾ ಪರೀಕ್ಷೆಯಲ್ಲಿ ಫೇಲಾದವರು ಪೂರಕ ಪರೀಕ್ಷೆ ಬರೆಯಬೇಕಿತ್ತು. ಈಗ ಪಾಸಾದವರು ಸೇರಿದಂತೆ ಎಲ್ಲರೂ ಮೂರು ಬಾರಿ ಪರೀಕ್ಷೆ ಬರೆಯಬಹುದಾಗಿದೆ. ಫೇಲಾದವರಿಗೆ ಪಾಸಾಗಲು ಅವಕಾಶ ಸಿಕ್ಕರೇ ಇತ್ತ ಪಾಸಾದವರಿಗೆ ಹೆಚ್ಚಿನ ಅಂಕ ಗಳಿಸಲು ಇದು ಸಹಕರಿಸಲಿದೆ. ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ತಮಗೆ ಯಾವ ಅಂಕ ಸೂಕ್ತವಾಗಲಿದೆ ಅದನ್ನೆ ಅಂತಿಮ ಅಂಕ ಪಟ್ಟಿಯಲ್ಲಿ ನಮೂದಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

Tags: