ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಈಗಲೂ ಅಪರಾಧಿಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸುತ್ತೇವೆ.
ಸಿದ್ದರಾಮಯ್ಯ ನಿರಪರಾಧಿ ಎಂದು ಕ್ಲೀನ್ ಚಿಟ್ ಕೊಟ್ಟಿದ್ದಾರಾ? ಕ್ಲೀನ್ ಚಿಟ್ ಎಂದು ತೀರ್ಪು ಬಂದಿದ್ದರೆ ಕಾಂಗ್ರೆಸ್ ವಿಜೃಂಭಿಸಬೇಕು. ಆದರೆ ಸಿದ್ದರಾಮಯ್ಯ ನೀವು ಈಗಲೂ ಕೂಡ ಅಪರಾಧಿಯೇ? ಇವತ್ತಲ್ಲ ನಾಳೆ ನೀವು ಸಿಕ್ಕಿ ಬೀಳುತ್ತೀರಿ. ಸಿಎಂ ಅವರೇ ನೀವು ದಾಖಲೆಗಳನ್ನು ಮುಚ್ಚಿಟ್ಟಿದ್ದರಿಂದ ಕೋರ್ಟ್‌ನಲ್ಲಿ ದಾಖಲೆ ಕೊಡಲು ಕಷ್ಟವಾಗಿದೆ ಎಂದರು.





