ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ ಶಾಮನೂರು ಶಿವಶಂಕರಪ್ಪನನ್ನು ಪಕ್ಷದಿಂದ ಸಸ್ಪೆಂಡ್ ಮಾಡಿ ಹೊರಗೆ ಹಾಕಿ ಎಂದು ಬಿಜೆಪಿ ಎಂಎಲ್‌ಸಿ ʼಹಳ್ಳಿ ಹಕ್ಕಿʼ ಹೆಚ್.ವಿಶ್ವನಾಥ್ ಏಕವಚನದಲ್ಲೇ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಜೀವನದುದ್ದಕ್ಕೂ ಕಾಂಗ್ರೆಸ್‌ನಿಂದ ಸಹಾಯ ಪಡೆದುಕೊಂಡು ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಎಂದು ಜಗತ್ತಿಗೆ ತೋರಿಸಿದವರು ದೇವರಾಜ ಅರಸು. ಅವರನ್ನು ಒಂದು ದಿನವಾದರೂ ನೆನಿತಾನ ಇವನು ಎಂದರು.
ಆತನ ಸಂಪೂರ್ಣ ಬೆಳವಣಿಗೆಗೆ ದೇವರಾಜ ಅರಸು ಕಾರಣ. ನಾವಾದರು ಅರಸು ಅವರನ್ನು ನೆನೆಯುತ್ತೇವೆ ಆದರೆ ಅವರೆಂದು ನೆನೆಯುವುದಿಲ್ಲ. ಕೃತಜ್ಞತೆಯೇ ಇಲ್ಲದವರು. ಚೆನ್ನಾಗಿ ದುಡ್ಡು ಮಾಡಿದ್ದಾನೆ. ಯಾರನ್ನ ಬೇಕಾದರೂ ಕೊಂಡುಕೊಳ್ಳುತ್ತೇನೆ ಎನ್ನುತ್ತಾನೆ ಎಂದು ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವನಿಲ್ಲದಿದ್ದರೆ ಪಕ್ಷ ನಡೆಯಲ್ವೇ? ಪಕ್ಷ ನಡೆಯುವುದು ಜನರಿಂದ ಎಂದು ಹೇಳಿದರು.
ನಮ್ಮವರಿಗೂ ಬುದ್ದಿ ಇಲ್ಲ : ನಮ್ಮ ಯಾವುದೇ ಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ದಾವಣಗೆರೆಗೆ ಹೋದರೆ ಅವರ ಗೆಸ್ಟ್‌ಹೌಸ್‌ನಲ್ಲೇ ಮಲಗುತ್ತಾರೆ. ಅವನ ಮನಗೆ ಉಣ್ಣಲಿಕ್ಕೆ ಹೋಗುತ್ತಾರೆ. ಯಾರಾದರು ಕಾರ್ಯಕರ್ತರ ಮನೆಗೆ ಹೋಗಿ ಅಂಥಾ ನಾನು ಬಹಳಾ ಸತಿ ಹೇಳೀದ್ದೇನೆ. ನೀವೆಲ್ಲಾ ಅವನ ಮನಗೆ ಹೋದರೆ ನಿಮಗೆ ತಿರುಗಿಸಿ ಮಾತನಾಡುತ್ತಾನೆ. ನಮ್ಮ ಕಾಂಗ್ರೆಸ್ ಪಕ್ಷದ ಬಂಡೆ ಡಿಕೆಶಿ ನಿಜವಾದ ಬಂಡೆಯಾಗಿದ್ದರೆ, ಪಕ್ಷದಿಂದ ಅವನನ್ನು ಹೊರಗೆಹಾಕಿ ಎಂದು ಹೆಚ್.ವಿಶ್ವನಾಥ್ ಸವಾಲು ಹಾಕಿದ್ದಾರೆ.