Mysore
27
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಂತ್ರಸ್ತೆ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ : ಪ್ರಜ್ವಲ್​​ ರೇವಣ್ಣ, ಪ್ರೀತಂ ಗೌಡ ವಿರುದ್ಧ FIR

ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್​​ ಮಾಡಿರುವ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಹಾಗೂ ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಇವರ ಆಪ್ತರಾದ ಕಿರಣ, ಶರತ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬೆಂಗಳೂರು ಸೈಬರ್​ ಕ್ರೈಂ ಠಾಣೆಯಲ್ಲಿ, ಐಪಿಸಿ ಸೆಕ್ಷನ್​ 354(A) ಲೈಗಿಂಕ ಕಿರುಕುಳ, 354(D) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(B) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು‌ ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆ್ಯಕ್ಟ್​​ ಅಡಿಯಲ್ಲಿ ನಾಲ್ವರ ವಿರುದ್ಧ ದೂರು​ ದಾಖಲಾಗಿದೆ.

ಪ್ರಕರಣದಲ್ಲಿ ಪ್ರೀತಂಗೌಡ ಎ4 ಆಗಿದ್ದು, ಪ್ರೀತಂ ಗೌಡ ವಿರುದ್ಧ ಪೆನ್ ಡ್ರೈವ್ ಖರೀದಿ ಮಾಡಿಸಿದ ಬಳಿಕ ಹಂಚಿದ ಆರೋಪ ಕೇಳಿ ಬಂದಿದೆ. ಹೀಗಾಗಿ ಪ್ರೀತಂಗೌಡರಿಗೆ ಎಸ್​ಐಟಿ ಯಾವುದೇ ಕ್ಷಣದಲ್ಲಾದರೂ ನೋಟಿಸ್ ನೀಡುವ ಸಾಧ್ಯತೆ ಇದೆ.

 

Tags:
error: Content is protected !!