ಬೆಂಗಳೂರು: ಮಗಳಿಗಾಗಿ ಪತ್ನಿ ಹಾಗೂ ನಟಿ ಚೈತ್ರಾರಾಮ್ ಅವರನ್ನು ನಿರ್ಮಾಪಕ ಹರ್ಷವರ್ಧನ್ ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದ್ದು, ಪ್ರಕರಣ ಸುಖಾಂತ್ಯವಾಗಿದೆ.
ನಟಿ ಚೈತ್ರಾ ಹಾಗೂ ನಿರ್ಮಾಪಕ ಹರ್ಷವರ್ಧನ್ ಮದುವೆ ಆಗಿದ್ದರು. ಆದರೆ ಕೌಟುಂಬಿಕ ಕಲಹದಿಂದ ಬೇರೆ ಆಗಿದ್ದರು. ಒಂದು ವರ್ಷದ ಮಗಳ ಜೊತೆಗೆ ನಟಿ ಚೈತ್ರಾ ಬೆಂಗಳೂರಿಗೆ ಬಂದಿದ್ದರು. ಚೈತ್ರಾಳನ್ನು ಕಿಡ್ನ್ಯಾಪ್ ಮಾಡಿ ಮಗಳನ್ನು ನೀಡುವಂತೆ ಹರ್ಷವರ್ಧನ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚೈತ್ರಾ ಸಹೋದರಿ ದೂರು ನೀಡಿದ್ದಾರೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ದಂಪತಿಗಳು ನಾವೇ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.





