ಬೆಂಗಳೂರು : ಒಂದು ಕಡೆ ವಿಜಯಲಕ್ಷ್ಮೀ ದರ್ಶನ್ ಅವರು ಅಭಿಮಾನಿಗಳಿಗೆ ತಾಳ್ಮೆಯ ಪಾಠ ಮಾಡಿದ್ದಾರೆ. ಮತ್ತೊಂದು ಕಡೆ ದರ್ಶನ್ ಖೈದಿ ನಂಬರ್ ಇಟ್ಕೊಂಡು ಅಭಿಮಾನ ಮೆರೆಯುತ್ತಿರುವ ಅಭಿಮಾನಿಗಳು, ಕೈ ಮೇಲೆ, ಮೈ ಮೇಲೆ ಅಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಟ್ರೆಂಡಿಂಗ್ ನಲ್ಲಿ ಖೈದಿ 6106 ನಂಬರ್ ಇದ್ದು, ಕೆಲ ಅಭಿಮಾನಿಗಳು ಬೈಕ್ ಗಳ ಮೇಲೆಯೂ ಖೈದಿ ಸಂಖ್ಯೆಯನ್ನ ಬರೆಸಿಕೊಳ್ಳುತ್ತಿದ್ದಾರೆ.
ಇದೀಗ ನಂಬರ್ ಪ್ಲೇಟ್ ವಿರೂಪಗೊಳಿಸಿದವರ ವಿರುದ್ದ ಸಮರ ಸಾರಲು ಆರ್ ಟಿಓ ಅಧಿಕಾರಿಗಳು ಮುಂದಾಗಿದ್ದು, ನಂಬರ್ ಪ್ಲೇಟ್ ವಿರೂಪಗೊಳಿಸಿ ಖೈದಿ ನಂಬರ್ ಹಾಕಿಸಿಕೊಂಡರೆ ದಂಡಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ.
ನಿಯಮದ ಪ್ರಕಾರ ನಂಬರ್ ಪ್ಲೇಟ್ ಮೇಲೆ ನಂಬರ್ ವಿರೂಪಗೊಳಿಸುವ ಆಗಿಲ್ಲ. ನಂಬರ್ ಪ್ಲೇಟ್ ಮೇಲೆ ಹಾಕೊಂಡು ಹುಚ್ಚು ಆಭಿಮಾನ ಮೆರೆದ್ರೆ ಕೇಸ್ ಹಾಕಲು ಆರ್ಟಿಓ ಅಧಿಕಾರಿಗಳು ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.