Mysore
26
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ ಭಾಗಿಯಾಗಿರಲಿಲ್ಲ : ಹೆಗೆಡೆ ಆಪಾದನೆ

ಮಂಗಳೂರು : ದೇಶ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನಲ್ಲಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಶಾಖೆಗಳಲ್ಲಿ ಕಬಡ್ಡಿ ಮೊದಲಾದ ಆಟಗಳನ್ನು ಆಡಿಕೊಂಡು ತಮಗೂ ಇದಕ್ಕೂ ಸಂಬಂಧವಿಲ್ಲದವರಂತೆ ಇದ್ದರು. ಬ್ರಿಟಿಷರ ಆಡಳಿತಕ್ಕೆ ಸಂಪೂರ್ಣವಾಗಿ ಶರಣಾಗಿದ್ದರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ(ಕೆಪಿಸಿಸಿ)ವಕ್ತಾರ ಎಂ.ಜಿ.ಹೆಗಡೆ ಆಪಾದಿಸಿದರು.

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸ್ವಾತಂತ್ರ ಹೋರಾಟಗಾರರಾದ ಸಾವರ್ಕರ್, ಕೇಳ್ಕರ್, ಮಹಾತ್ಮ ಗಾಂಽ ಅವರನ್ನು ಆರ್‌ಎಸ್‌ಎಸ್‌ನವರು ಬೆಂಬಲಿಸಲಿಲ್ಲ. ಬ್ರಿಟಿಷರ ಎಲ್ಲ ಕಾನೂನುಗಳನ್ನೂ ಆರ್‌ಎಸ್‌ಎಸ್ ಗೌರವಿಸಿತ್ತು ಎಂದು ದೂರಿದರು.

‘ಎದ್ದು ನಿಲ್ಲು ವೀರ ದೇಶ ಕಾದಿದೆ’ ಮೊದಲಾದ ಆರ್ ಎಸ್‌ಎಸ್ ಗೀತೆಗಳು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರಚನೆಯಾಗಿವೆ ಹೊರತು ಸ್ವಾತಂತ್ರ್ಯ ಪೂರ್ವದಲ್ಲಿ ರಚನೆಯಾಗಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:-ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌ಗೆ ತಿಂಗಳಿಗೊಮ್ಮೆ ಹೊದಿಕೆ, ಬಟ್ಟೆ ನೀಡಲು ಕೋರ್ಟ್ ಆದೇಶ

ಆರ್‌ಎಸ್‌ಎಸ್ ಸಂಘಟನೆಯಿಂದ ಗುರು ಪೌರ್ಣಮಿಯಂದು ಸಂಗ್ರಹವಾಗುವ ಗುರು ದಕ್ಷಿಣೆಯ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಆದಾಯ ತೆರಿಗೆ ಇಲಾಖೆ ನಿಯಮದ ಪ್ರಕಾರ ೫೦ ಸಾವಿರ ರೂ. ಗಿಂತ ಹೆಚ್ಚು ದೇಣಿಗೆ ಸಂಗ್ರಹವಾದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ವಿವಿಧ ಮೂಲಗಳಿಂದ ಬರುವ ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಇದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಸಂಘಟನೆಯ ೭೦ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ನೋಂದಣಿಯಾಗಿವೆ. ಆದರೆ ೧೦೦ ವರ್ಷದ ಇತಿಹಾಸವನ್ನು ಹೊಂದಿರುವ ಸಂಘಟನೆ ಭಾರತದಲ್ಲಿ ಏಕೆ ನೋಂದಣಿಯಾಗಿಲ್ಲ ಎಂದು ಪ್ರಶ್ನಿಸಿದರು.

ಸರ್ಕಾರದ ಕಾನೂನಿನ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಟನೆ ಕಾರ್ಯಕ್ರಮನಡೆಸಬೇಕಾದರೆ ಸರ್ಕಾರದ ಪೂರ್ವನುಮತಿ ಪಡೆಯುವುದು ಕಡ್ಡಾಯ ಆದರೆ ಆರ್‌ಎಸ್‌ಎಸ್‌ನವರು ಹಲವಾರು ವರ್ಷಗಳಿಂದ ಸರ್ಕಾರಿ, ಅನುದಾನಿತ ಶಾಲೆ ಕಾಲೇಜುಗಳ ಮೈದಾನವನ್ನು ಸಂಘದ ಶಾಖೆಗಳನ್ನು ನಡೆಸಲು ಬಳಸುತ್ತಿರುವುದು ಕಾನೂನು ಬಾಹಿರವಾಗಿದೆ. ಹಾಗಾದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಪೋರ್ಟ್ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ಶಾಖೆಗಳನ್ನು ಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಥಳಗಲ್ಲಿ ಬೇರೆ ಸಂಘಟನೆಗಳು ಅನುಮತಿ ಪಡೆಯದೆ ಸಭೆ, ಸಮಾರಂಭಗಳನ್ನು ನಡೆಸಲು ಅನುಮತಿ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

Tags:
error: Content is protected !!