ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್‍ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಸಚಿವ ಪ್ರಿಯಾಂಕ ಖರ್ಗೆ ಬರೆದ ಪತ್ರ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಾನು ಆರ್ ಎಸ್‍ಎಸ್‍ನ ಸ್ವಯಂ ಕಾರ್ಯಕರ್ತ. ತಾಕತ್ತಿದ್ದರೆ ನನ್ನನ್ನು ನಿಷೇಧಿಸಿ ಎಂಬ ಅಭಿಯಾನ ಪ್ರಾರಂಭವಾಗಿದೆ.
ಗಿರೀಶ್ ಬಾರಾದ್ವಾಜ್ ಎಂಬುವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಾನು ಆರ್‍ಎಸ್‍ಎಸ್ ಕಾರ್ಯಕರ್ತ. ತಾಕತ್ತಿದ್ದರೆ ನಿರ್ಬಂಧಿಸಿ ಎಂದು ಯಾರ ಹೆಸರನ್ನು ಉಲ್ಲೇಖ ಮಾಡದೆ ಸವಾಲು ಹಾಕಿದ್ದಾರೆ.
ಈ ಅಭಿಯಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ಕೂಡ ಆರ್‍ಎಸ್‍ಎಸ್ ಕಾರ್ಯಕರ್ತನೆ. ಧಮ್ ಇದ್ದರೆ ಬಂಧಿಸಿ ಎಂದು ಸವಾಲು ಹಾಕುತ್ತಿದ್ದಾರೆ. ಅನೇಕರು ಇದನ್ನು ಹ್ಯಾಶ್ ಟ್ಯಾಗ್ ಮಾಡಿ ನಾನು ಕೂಡ ಆರ್‍ಎಸ್‍ಎಸ್ ಕಾರ್ಯಕರ್ತನೇ. ನನ್ನನ್ನು ನಿರ್ಬಂಧಿಸಿ ಎಂದು ಕಿಡಿಕಾರುತ್ತಿದ್ದಾರೆ.





