Mysore
25
broken clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ: ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯೆ ಹೀಗಿತ್ತು

ಬೆಂಗಳೂರು: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯಿಸಿ, ಇದು ಆತಂಕಕಾರಿ ಘಟನೆ, ಕೊಲೆ ವಿಚಾರ ತಿಳಿದು ನನಗೆ ಗಾಬರಿಯಾಗಿದೆ, ಪ್ರಕರಣದ ಬಗ್ಗೆ ತನಿಖೆ ನಡೆದು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

ಇದು ಚಿತ್ರರಂಗದಲಿ ಆತಂಕ ಸೃಷ್ಟಿಸುವ ಘಟನೆ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಶಿಸ್ತು ಮುಖ್ಯ. ದರ್ಶನ್‌ ಒಳ್ಳೆಯ ಹುಡುಗ ಅಂತ ಅಂದುಕೊಂಡಿದ್ದೆವು. ಕೊಲೆ ವಿಷಯ ತಿಳಿದಾಗ ನನಗೆ ಗಾಬರಿ ಗೊಂದಲ ಆಯಿತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪತಿ ಕಳೆದುಕೊಂಡ ಹೆಣ್ಣುಮಗಳ ನೋವು ಅರ್ಥವಾಗುತ್ತದೆ. ಇಂತಹ ಕೃತ್ಯ ಆಗಬಾರದಿತ್ತು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟಿ ಉಮಾಶ್ರೀ ಹೇಳಿದರು.

Tags:
error: Content is protected !!