Mysore
25
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಮಂಡ್ಯ | ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಬಂದಿದ್ದ ಕೈದಿ ಜನರ ಕೈಗೆ ಸಿಕ್ಕಿಬಿದ್ದ

ಮಂಡ್ಯ : ಕೈಯ್ಯಲ್ಲಿ ಬೇಡಿ ಹಾಕಿ ಕೊಂಡಿರುವಾಗಲೇ ಠಾಣೆಯಿಂದ ತಪ್ಪಿಸಿಕೊಂಡು ಬಂದ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಇಲ್ಲಿನ ಗಾಂಧಿನಗರದಲ್ಲಿ ಜರುಗಿದೆ.

ನವೀದ್ ಎಂಬಾತನೇ ಸಿಕ್ಕಿಬಿದ್ದಿರುವ ಕಳ್ಳ. ಕಳ್ಳತನ ಆರೋಪದಡಿ ಈತನನ್ನು ವಿಚಾರಣೆಗಾಗಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದಿದ್ದ ವೇಳೆ ಬೇಡಿ ಸಮೇತ ಪೊಲೀಸರ ಕಣ್ತಪ್ಪಿಸಿ ಠಾಣೆಯಿಂದ ತಪ್ಪಿಸಿಕೊಂಡಿದ್ದನು. ಬೇಡಿ ಹಾಕಿಕೊಂಡು ಸಾರ್ವಜನಿಕವಾಗಿ ಓಡಾಡುತ್ತಾ ಜನರಲ್ಲಿ ಆತಂಕ ಮೂಡಿಸಿ ದ್ದನು.

ಠಾಣೆಯಿಂದ ತಪ್ಪಿಸಿಕೊಂಡು ಬಂದ ನವೀದ್ ಗಾಂಧಿನಗರದಲ್ಲಿರುವ ಮನೆ ಯೊಂದರ ಕಾಂಪೌಂಡ್ ಹಾರಿದ್ದಾನೆ. ಈ ವೇಳೆ ಅನುಮಾನಗೊಂಡು ಆತ ನನ್ನು ಹಿಂಬಾಲಿಸಿದ್ದ ಸ್ಥಳೀಯರು ಆತ ನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿ ದ್ದಾರೆ. ಬಳಿಕ ವಿಚಾರಿಸಿದಾಗ ಕಳ್ಳತನ ಪ್ರಕ ರಣವೊಂದರಲ್ಲಿ ಸಿಕ್ಕಿಬಿದ್ದು ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಬಂದಿ ದ್ದಾಗಿ ಹೇಳಿದ್ದಾನೆ. ನಂತರ ಪೊಲೀಸ ರಿಗೆ ಮಾಹಿತಿ ನೀಡಿ, ನವೀದ್‌ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದರು.

Tags:
error: Content is protected !!