Mysore
20
few clouds

Social Media

ಶನಿವಾರ, 24 ಜನವರಿ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್‌ಗೆ ಜೈಲೋ, ಬೇಲೋ ; ತೀರ್ಪು ಕಾದಿರಿಸಿದ ಸುಪ್ರೀಂ…

Another shock for challenging star darshan

ಹೊಸದಿಲ್ಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ರೀತಿಗೆ ಕರ್ನಾಟಕ ಉಚ್ಚ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ. ಇದರೊಂದಿಗೆ ದರ್ಶನ್‌ಗೆ ಇನ್ನು 10 ದಿನ ನಿರಾಳ ದೊರೆತಿದೆ. ಆದರೆ ಆತಂಕ ದೂರವಾಗಿಲ್ಲ.

ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಪೈಕಿ ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕವಷ್ಟೇ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವುದಾಗಿ ನ್ಯಾಯಾಲಯ ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯಪೀಠವು, ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಂಗ ವಿವೇಚನೆಯನ್ನು ನ್ಯಾಯಯುತವಾಗಿ ಅನ್ವಯಿಸಲಾಗಿದೆಯೇ ಎಂದು ಪ್ರಶ್ನಿಸಿದ ಪೀಠವು, ಆದೇಶದ ಬಗ್ಗೆ ನಾವು ಹೇಳಲು ವಿಷಾದಿಸುತ್ತೇವೆ. ಆದರೆ ಉಚ್ಚ ನ್ಯಾಯಾಲಯ ಎಲ್ಲಾ ಜಾಮೀನು ಅರ್ಜಿಗಳಲ್ಲಿ ಒಂದೇ ರೀತಿಯ ಆದೇಶಗಳನ್ನು ನಿರ್ದೇಶಿಸುತ್ತದೆಯೇ ಎಂದು ಪ್ರಶ್ನೆ ಮಾಡಿತು.

ನಮಗೆ ಸಮಸ್ಯೆಯಾಗಿರುವುದು ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ವಿಧಾನ. ಇದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ತಿಳಿವಳಿಕೆಯೇ? ಸೆಷನ್ಸ್ ನ್ಯಾಯಾಧೀಶರಾಗಿದ್ದರೆ ನಮಗೆ ಅರ್ಥವಾಗುತ್ತಿತ್ತು. ಆದರೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪು ಮಾಡುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

ಇದನ್ನು ವಿವೇಚನೆಯ ತೀರ್ಪು ಎನ್ನಲು ನಾವ್ಯಾರು ಒಪ್ಪುತ್ತಿಲ್ಲ ಎಂದ ಸವೋಚ್ಚ ನ್ಯಾಯಾಲಯ ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವ ಮೊದಲು ಉಚ್ಚ ನ್ಯಾಯಾಲಯ ತನ್ನ ಮನಸ್ಸನ್ನು ವಿವೇಚನಾಯುಕ್ತವಾಗಿ ಬಳಸಿದೆಯೇ ಎಂದು ಮರುಪ್ರಶ್ನೆ ಮಾಡಿದರು.

ಉಚ್ಚ ನ್ಯಾಯಾಲಯ ಮಾಡಿದ ಅದೇ ತಪ್ಪನ್ನು ನಾವು ಮಾಡುವುದಿಲ್ಲ ಎಂದ ಪೀಠ, ಇದು ಕೊಲೆ ಮತ್ತು ಪಿತೂರಿಯ ಪ್ರಕರಣವಾಗಿರುವುದರಿಂದ ನಾವು ಸ್ವಲ್ಪ ಗಂಭೀರವಾಗಿರುತ್ತೇವೆ ಎಂದು ಹೇಳಿತು.

ಸಹ-ಆರೋಪಿ ಪವಿತ್ರಾ ಗೌಡ ಪರ ವಕೀಲರನ್ನು ಉದ್ದೇಶಿಸಿ ಪೀಠವು, ಇದೆಲ್ಲವೂ ನಿಮ್ಮಿಂದಾಗಿ ಸಂಭವಿಸಿದೆ. ನೀವು ಅಲ್ಲಿ ಇಲ್ಲದಿದ್ದರೆ, ಎ2 ಆಸಕ್ತಿ ಹೊಂದಿರಲಿಲ್ಲ. ಎ2 ಆಸಕ್ತಿ ಹೊಂದಿಲ್ಲದಿದ್ದರೆ, ಇತರರು ಆಸಕ್ತಿ ಹೊಂದಿರಲಿಲ್ಲ. ಆದ್ದರಿಂದ ಸಮಸ್ಯೆಗೆ ನೀವೇ ಮೂಲ ಕಾರಣ ಎಂದು ತರಾಟೆಗೆ ತೆಗೆದುಕೊಂಡಿತು.

ವಾದವನ್ನು ಆಲಿಸಿದ ನ್ಯಾಯಾದೀಶರು ವಾದದ ಸಾರಾಂಶವನ್ನು 3 ಪುಟಗಳಲ್ಲಿ ನ್ಯಾಯಾಲಯಕ್ಕೆ ಒಂದು ವಾರದೊಳಗೆ ಸಲ್ಲಿಸುವಂತೆ ಸೂಚಿಸಿದರು. ಹೀಗಾಗಿ 10 ದಿನಗಳ ನಂತರವಷ್ಟೇ ತೀರ್ಪು ಹೊರಬೀಳಲಿದೆ.

ದಿಗ್ಭ್ರಾಂತರಾದ ನ್ಯಾಯಾಧೀಶರು
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಕರೆ ದತ್ತಾಂಶ ದಾಖಲೆಗಳು, ಸ್ಥಳ ಪಿನ್‌ಗಳು, ಬಟ್ಟೆ ಮತ್ತು ವಾಹನದ ಮೇಲಿನ ಡಿಎನ್‌ಎ ಮತ್ತು ಇತರ ವಸ್ತುಗಳು ಈ ಹೇಳಿಕೆಗಳನ್ನು ಬೆಂಬಲಿಸುತ್ತವೆ. ಇದೆಲ್ಲವೂ ದೃಢೀಕರಿಸಲ್ಪಟ್ಟಿದೆ ಎಂದು ಹೇಳಿದರು.

ಆರೋಪಿಗಳಲ್ಲಿ ಒಬ್ಬರಿಂದ ಪಡೆದ ಸಾಕ್ಷ್ಯಗಳ ಸ್ವರೂಪವನ್ನು ನ್ಯಾಯಪೀಠ ಮತ್ತಷ್ಟು ಪ್ರಶ್ನಿಸಿತು. ನೀವು 10 ನೇ ಆರೋಪಿಯಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೀರಿ. ಯಾರಾದರೂ ಹಲ್ಲೆಯ ಚಿತ್ರಗಳನ್ನು ಏಕೆ ಕ್ಲಿಕ್ಕಿಸುತ್ತಾರೆ? ಎಂದು ಕೇಳಿತು. ಚಿತ್ರಗಳನ್ನು ಎ2 ಗೆ ರವಾನಿಸಲಾಗಿದೆ ಮತ್ತು ಮೃತರು ಒಂದು ಫೋಟೋದಲ್ಲಿ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ ಎಂದಾಗ ನ್ಯಾಯಾಧೀಶರು ದಿಗ್ಬ್ರಾಂತರಾದರು.

ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದಿದ್ದರು. ಆ ಬಳಿಕ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸಂಪೂರ್ಣ ಜಾಮೀನು ದೊರೆತಿತ್ತು. ಇದನ್ನು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಈಗ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

ವಿದೇಶದಲ್ಲಿ ದರ್ಶನ್
ದರ್ಶನ್ ಅವರು ಜು. 15ರಂದು ‘ಡೆವಿಲ್’ ಸಿನಿಮಾ ಶೂಟಿಂಗ್‌ಗೆ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಹಾಡಿನ ಚಿತ್ರೀಕರಣ ಹಾಗೂ ಒಂದು ಫೈಟ್ ದೃಶ್ಯದ ಶೂಟ್ ಬಾಕಿ ಇದೆ. ಜುಲೈ 25ರಂದು ಅವರು ಬೆಂಗಳೂರಿಗೆ ಮರಳಲಿದ್ದಾರೆ.

Tags:
error: Content is protected !!