ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 64ನೇ ಸಿಸಿಎಚ್ ನ್ಯಾಯಾಲಯವು ನವೆಂಬರ್.10ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಡಿ ಗ್ಯಾಂಗ್ ಮೇಲೆ ಚಾರ್ಜ್ ಫ್ರೇಮ್ ಪ್ರಕ್ರಿಯೆಯನ್ನು ನವೆಂಬರ್.10ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಅಂದೇ ಡಿ ಗ್ಯಾಂಗ್‌ಗೆ ಬಿಗ್ ಡೇ ಆಗಲಿದೆ.
ಇದನ್ನು ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಪ್ರಕರಣದಿಂದ ಕೈಬಿಡುವಂತೆ ನಟ ದರ್ಶನ್ ಅರ್ಜಿ ಸಲ್ಲಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಇಂದೇ ಕೊಲೆ ಕೇಸ್‌ನ ದೋಷಾರೋಪ ನಿಗದಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇಂದು ಮಧ್ಯಾಹ್ನ ವಿಚಾರಣೆ ನಡೆಸಿದ ಕೋರ್ಟ್, ಡಿ ಗ್ಯಾಂಗ್ ಮೇಲೆ ಚಾರ್ಜ್ ಫ್ರೇಮ್ ಪ್ರಕ್ರಿಯೆಯನ್ನು ನವೆಂಬರ್.10ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಅಂದು ದರ್ಶನ್ ತಪ್ಪೊಪ್ಪಿಕೊಂಡರೆ ಶಿಕ್ಷೆ ಆಗಲಿದೆ. ಒಪ್ಪಿಕೊಳ್ಳದೇ ಇದ್ದರೆ ವಿಚಾರಣೆ ನಡೆಯಲಿದೆ.





