ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಬಿಜೆಪಿ ರೇಣುಕಾಸ್ವಾಮಿ ಕುಟುಂಬ ಜೊತೆಯಿದೆ: ಸಿಟಿ ರವಿ

ಚಿಕ್ಕಮಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕನ್ನಡದ ಖ್ಯಾತ ನಟ ದರ್ಶನ್‌ ವಿರುದ್ಧ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ.

ನಟ ದರ್ಶನ್‌ ಹತ್ಯೆ ಮಾಡಿರುವುದು ಇಡೀ ನಾಗರೀಕ ಸಮುದಾಯ ತಲೆ ತಗ್ಗಿಸುವ ವಿಷಯವಾಗಿದೆ. ಇದೇ ರೀತಿ ರಾಜಕೀಯ ವ್ಯಕ್ತಿಗಳ ಮೇಲಿನ ಟೀಕೆಗೆ ಹೀಗೆ ಮಾಡುವುದಾದರೇ ಗಂಟೆಗೆ ಒಂದು ಹೆಣ ಬೀಳುತ್ತಿತ್ತು ಎಂದು ಹೇಳಿದರು.

ದರ್ಶನ್‌ಗೆ ಅಷ್ಟು ಕ್ರೂರ ಮನಸ್ಥಿತಿ ಇರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ದರ್ಶನ್‌ ಅವರ ಈ ಪ್ರಕರಣ ನೋಡುತ್ತಿದ್ದರೇ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದಾರೆ ಎನಿಸುತ್ತದೆ. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ವಲಯದಲ್ಲಿರುವವರಿಗೆ ಬದ್ಧತೆ ಇರಬೇಕು ಈ ಪ್ರಕರಣವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.