Mysore
25
light rain

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ: ಏಪ್ರಿಲ್.‌8ಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರಾ ಗೌಡ ಮತ್ತು ಗ್ಯಾಂಗ್‌ ವಿಚಾರಣೆಯನ್ನು ಏಪ್ರಿಲ್.‌8ಕ್ಕೆ ಮುಂದೂಡಿಕೆ ಮಾಡಿದೆ.

57ನೇ ಸೆಷನ್ಸ್‌ ಕೋರ್ಟ್‌ನಲ್ಲಿ ಇಂದು ಆರೋಪಿಗಳಾದ ದರ್ಶನ್‌ ಅಂಡ್‌ ಗ್ಯಾಂಗ್‌ನ ವಿಚಾರಣೆ ನಡೆದಿದ್ದು, ವಿಚಾರಣೆಗೆ ನಿಖಿಲ್‌ ಮತ್ತು ಕೇಶವಮೂರ್ತಿ ಗೈರಾಗಿದ್ದರು. ಉಳಿದಂತೆ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು.

ಕೋರ್ಟ್‌ನಲ್ಲಿ ಪೊಲೀಸರ ವಿರುದ್ಧ ದರ್ಶನ್‌ ಪರ ವಕೀಲರ ಆರೋಪ ಮಾಡಿದರು. ಇತರೆ ಆರೋಪಿಗಳನ್ನು ಮಾಫಿ ಸಾಕ್ಷಿ ಆಗಲು ಒತ್ತಡ ಹೇರುತ್ತಿದ್ದಾರೆ. ಬೇರೆ ಆರೋಪಿಗಳಿಗೆ ಮಾಫಿ ಸಾಕ್ಷಿ ಆಗಿ ಎಂದು ಒತ್ತಡ ಹೇರಲಾಗುತ್ತಿದೆ. ಸಾಕಷ್ಟು ಸಾಕ್ಷಿ ಇದೆ ಎಂದು ಹೇಳುತ್ತಾರೆ. ಹೈಕೋರ್ಟ್‌ನಲ್ಲಿ ಸಾಕಷ್ಟು ವಾದ ಮಂಡನೆ ಮಾಡಿದ್ದಾರೆ. ಹೀಗಿರುವಾಗ ಮಾಫಿ ಸಾಕ್ಷಿಯಾಗಲು ಒತ್ತಡ ಹಾಕಿದ್ದಾರೆ. ಇತರೆ ಆರೋಪಿಗಳು ತಪ್ಪು ಒಪ್ಪಿಕೊಂಡರೆ ಮಾಫಿ ಸಾಕ್ಷಿ ಮಾಡ್ತೀವಿ ಎಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪೂರ್ಣ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದಾರೆ. ಏಪ್ರಿಲ್.‌8ಕ್ಕೆ ವಿಚಾರಣೆ ಮುಂದೂಡಲಾಗಿದೆ.

 

Tags:
error: Content is protected !!