ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಆರೋಪಿಯೊಬ್ಬರ ತಂದೆ ಹೃದಯಾಘಾತದಿಂದ ಸಾವು,

ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾದ 7ನೇ ಆರೋಪಿ ಅನು ಅಲಿಯಾಸ್‌ ಅನುಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿ ತಿಳಿದ ಆತನ ತಂದೆ ಚಂದ್ರಣ್ಣ(60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತನ್ನ ಮಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ವಿಷಯದ ತಿಳಿದ ತಂದೆ ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಬಳಿಕ ಮಗನ ಬಂಧನವಾದಾಗ ಅವರು ತಮ್ಮ ಮನೆಯಲ್ಲಿ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.