ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆಳಕ್ಕೆ ತಲುಪುವ ಉಮೇದಿನಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಆರೋಪಿಗಳ ಹೇಳಿಕೆ ಹಾಗೂ ಸ್ಥಳ ಮಹಜರು ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜೂ.16) ಆರೋಪಿ ಎ1 ಪವಿತ್ರಗೌಡ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ಆರೋಪಿಗಳಾದ ಪವಿತ್ರಗೌಡ ಹಾಗೂ ಪವನ್‌ನನ್ನು ಕರೆದುಕೊಂಡು ಬರಲಾಗಿತ್ತು. ಈ ವೇಳೆ ಪೊಲೀಸರು ಪವಿತ್ರಾ ಬಳಸುತ್ತಿದ್ದ ಚಪ್ಪಲಿ,ಶೂ ಹಾಗೂ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಆರೋಪಿ ಪವಿತ್ರಗೌಡ ಹಾಗೂ ಪವನ್ ಮನೆಯಿಂದ ನಗು ನಗುತ್ತಲೇ ಹೊರಬಂದ ದೃಶ್ಯ ಕಂಡು ಬಂತು. ಕೊಲೆ ಮಾಡಿದ ಬಗ್ಗೆ ಸ್ವಲ್ವವು ಪಶ್ಚಾತಾಪವೇ ಇಲ್ಲದೇ ನಗು ಮುಖದಲ್ಲಿ ಪವಿತ್ರಗೌಡ ಇದ್ದರು. ಸದ್ಯ ಈ ವಿಡಿಯೋಗಳು ಎಲ್ಲಡೇ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಪವಿತ್ರಗೌಡ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.