ಬೆಂಗಳೂರು: ಕಳೆದ ನಾಲ್ಕು ತಿಂಗಳಿನಿಂದ ಪಡಿತದ ಆಹಾರ ಧಾನ್ಯ ಸಾಗಾಣಿಕೆ ವೆಚ್ಚ ನೀಡಿದ ಹಿನ್ನೆಲೆಯಲ್ಲಿ ಪಡಿತರ ಲಾರಿ ಮಾಲೀಕರು ಹಾಗೂ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿದ ಪಡಿತದ ಆಹಾರ ಧಾನ್ಯ ಸಾಗಾಣಿಕೆ ವೆಚ್ಚ 260 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಚಾಲಕರು ಹಾಗೂ ಮಾಲೀಕರು ಮುಷ್ಕರ ನಡೆಸುತ್ತಿದ್ದು, ಈ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎನ್ನಲಾಗುತ್ತಿದೆ.
ಮುಷ್ಕರ ಕುರಿತು ಮಾತನಾಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಷಣ್ಮುಗಪ್ಪ ಅವರು, ನಮ್ಮ ಖಾತೆಗೆ ಹಣ ಬರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ 5 ತಿಂಗಳಿನಿಂದ 260 ಕೋಟಿ ರೂ ಬಿಡುಗಡೆ ಮಾಡಬೇಕು. ಜೂ.19ರಂದು 100 ಕೋಟಿ ರೂ ಹಾಕುವುದಾಗಿ ಹೇಳಿದ್ದರು. ಈವರೆಗೂ 1 ರೂ ಹಣವನ್ನೂ ನೀಡಿಲ್ಲ. ಹಾಗಾಗಿ ಇಂದಿನಿಂದ ಮುಷ್ಕರ ಮಾಡುತ್ತಿದ್ದೇವೆ. ಖಾತೆಗೆ ಹಣ ಬಂದ ಮೇಲೆ ಅಕ್ಕಿ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದಾರೆ.





