Mysore
30
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ರಾಮನಗರ: ಗೀಸರ್‌ನಿಂದ ವಿಷನಿಲ ಸೋರಿಕೆ, ತಾಯಿ ಮಗ ಸಾವು

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಗೀಸರ್‌ನಿಂದ ವಿಷನಿಲ ಸೋರಿಕೆಯಾಗ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶೋಭಾ(40), ಪುತ್ರ ದಿಲೀಪ್(‌16) ಸಾವನ್ನಪ್ಪಿದವರು. ಮನೆಯಲ್ಲಿ ಗೀಸರ್‌ ಆನ್‌ ಮಾಡಿ ಆಫ್‌ ಮಾಡುವುದನ್ನು ಮರೆತು ಹೋಗಿದ್ದಾರೆ. ತುಂಬ ಹೊತ್ತು ಆನ್‌ ಆಗಿದ್ದರಿಂದ ಹಾಗೂ ಮನೆಯ ಬಾಗಿಲು,ಕಿಟಕಿ ಮುಚ್ಚಿದ್ದರಿಂದ ಮನೆಯೊಳಗೆ ವಿಷನಿಲ ಆವರಿಸಿಕೊಂಡಿದೆ. ಹೀಗಾಗಿ ಶ್ವಾಸಕೋಶಕ್ಕೆ ವಿಷನಿಲ ಹೊಕ್ಕಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.

ಘಟನ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಯಿ ಮತ್ತು ಮಗನ ಶವವನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮಾಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

 

Tags:
error: Content is protected !!