Mysore
29
scattered clouds
Light
Dark

ರಾಮನಗರ: ಮೂವರು ಬಾಲಕರು ಜಲಸಮಾಧಿ

ರಾಮನಗರ: ತಗ್ಗು ಪ್ರದೇಶದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿಯಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ಜರುಗಿದೆ.

ಇಂದು (17) ಗ್ರಾಮದ ಬಳಿ ಇರುವ ಬೆಟ್ಟದ ಮೇಲಿನ ತಗ್ಗು ಪ್ರದೇಶಕ್ಕೆ ಬಾಲಕರು ಈಜಲು ತೆರಳಿದ್ದರು ಈ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಶಾಬಾಜ್(14)‌, ಸುಲ್ತಾನ್‌ (13) ರಿಹಾನ್‌ ಖಾನ್(16)‌ ಮೃತಪಟ್ಟವರು. ವಿಷಯ ತಿಳಿದ ರಾಮನಗರ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಕ್ಕಳ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಮೃತರು ರಾಮನಗರ ಟೌನ್‌ನ ಸುಲ್ತಾನ್‌ನಗರದ ವಾಸಿಗಳಾಗಿದ್ದು, ಒಟ್ಟು 8 ಬಾಲಕರು ಈಜಾಡಲು ಹೋಗಿದ್ದರು, ಈ ಪೈಕಿ ಮೂವರು ಬಾಲಕರು ಜಲಸಮಾಧಿಯಾಗಿದ್ದಾರೆ.