ಬೆಂಗಳೂರು: ರಾಜ್ಯ ರಾಜಾಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಶನಿವಾರ ಮಳೆಯಿಂದ ಮರ ಮುರಿದು ಬಿದ್ದು ಬೆಂಗಳೂರಿನಲ್ಲಿ ಬಾಲಕಿಯೊಬ್ಬಲು ಸಾವನ್ನಪ್ಪಿದ್ದಳು. ಇದೀಗ ಇಂದು(ಮಾ.23) ಚಿಕ್ಕಮಗಳೂರಿನಲ್ಲಿ ಸಿಡಿಲಿಗೆ ಓರ್ವ ವೃದ್ಧೆ ಬಲಿ ಆಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ವರ್ಷದ ಮೊದಲ ಆರಂಭದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ (65) ಸಿಡಿಲಿಗೆ ಬಲಿ ಆಗಿದ್ದಾರೆ.
ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವೆಡೆ ಜೋರು ಮಳೆ ಸುರಿದಿದೆ. ಕೋಲಾರ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದ್ದು, ಮಳೆಯಿಂದ ಮಾವು ಬೆಳೆ ನೆಲಕಚ್ಚಿದೆ. ಇನ್ನೂ ರಸ್ತೆಯೆಲ್ಲ ಜಲಾವೃತವಾಗಿದೆ.