Mysore
25
haze

Social Media

ಗುರುವಾರ, 01 ಜನವರಿ 2026
Light
Dark

ರೈಲ್ವೆಯಲ್ಲಿ 6000 ಹುದ್ದೆ

ರೈಲ್ವೆ ನೇಮಕಾತಿ ಮಂಡಳಿ (RRB) 6180 ತಂತ್ರಜ್ಞ ಗ್ರೇಡ್-1 ಮತ್ತು ಗ್ರೇಡ್-3 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಜೂ. 28 ರಿಂದ ಜುಲೈ 28ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಯೋಮಿತಿ 18 ರಿಂದ 30 ವರ್ಷ ನಿಗದಿಪಡಿಸಲಾಗಿದ್ದು, ಸರ್ಕಾರದ ನಿಯಮಾವಳಿ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ರಿಯಾಯಿತಿ ದೊರೆಯಲಿದೆ. ಈ ನೇಮಕಾತಿಯಲ್ಲಿ ತಂತ್ರಜ್ಞ ಗ್ರೇಡ್-1ಗೆ 180 ಹುದ್ದೆಗಳು ಮತ್ತು ಗ್ರೇಡ್-3ಯ 6000 ಹುದ್ದೆಗಳು ಸೇರಿವೆ.

ಈ ಎಲ್ಲಾ ಹುದ್ದೆಗಳನ್ನು ಭಾರತೀಯ ರೈಲ್ವೆಯ ವಿವಿಧ ರೈಲ್ವೆ ವಲಯಗಳಲ್ಲಿ ಭರ್ತಿ ಮಾಡಲಾಗುತ್ತದೆ. ತಂತ್ರಜ್ಞ ಗ್ರೇಡ್-1 ಹುದ್ದೆಗೆ 29200 ರೂ. , ತಂತ್ರಜ್ಞ ಗ್ರೇಡ್-3 ಹುದ್ದೆಗೆ 19,900 ರೂ. ಮಾಸಿಕ ವೇತನ ದೊರೆಯಲಿದೆ.

ಹೆಚ್ಚಿನ ಮಾಹಿತಿಗೆ ರೈಲ್ವೆ ಮಂಡಳಿಯ ಅಧಿಕೃತ ವೆಬ್‌ಸೈಟ್ rrbapply.gov.inಗೆ ಭೇಟಿ ನೀಡಿ.

Tags:
error: Content is protected !!