Mysore
23
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ನಮ್ಮ ಮೆಟ್ರೋ ಪ್ರಯಾಣಿಕರಿಗೆ QR ಕೋಡ್‌ ಆಧಾರಿತ ಅನ್‌ಲಿಮಿಟೆಡ್‌ ಪಾಸ್‌: ನಾಳೆಯಿಂದಲೇ ಜಾರಿ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ 1, 3 ಹಾಗೂ 5 ದಿನಗಳ ಅನ್‌ಲಿಮಿಟೆಡ್‌ ಕ್ಯೂಆರ್‌ ಕೋಡ್‌ ಪಾಸ್‌ ಸೇವೆ ಆರಂಭಿಸಿದೆ. ನಾಳೆಯಿಂದಲೇ ಇದು ಚಾಲ್ತಿಗೆ ಬರಲಿದೆ.

ಇದುವರೆಗೂ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್‌ ಸ್ಮಾರ್ಟ್‌ ಕಾರ್ಡ್‌ಗಳ ಮೂಲಕವೇ ಲಭ್ಯವಾಗುತ್ತಿದ್ದು, 50 ರೂ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್‌ ಕ್ಯೂಆರ್‌ಕೋಡ್‌ ಪಾಸ್‌ಗಳ ಪರಿಚಯದೊಂದಿಗೆ ಪಾಸ್‌ಗಳು ಮೊಬೈಲ್‌ ಫೋನ್‌ಗಳಲ್ಲಿ ಡಿಜಿಟಲ್‌ ರೂಪದಲ್ಲಿ ಲಭ್ಯವಾಗುತ್ತವೆ. ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.

ಪಾಸ್‌ ದರಗಳು:
1 ದಿನದ ಪಾಸ್:‌ 250 ರೂ
3 ದಿನಗಳ ಪಾಸ್:‌ 550 ರೂ
5 ದಿನಗಳ ಪಾಸ್‌: 850 ರೂ

 

Tags:
error: Content is protected !!