ವರ್ಷಕ್ಕೊಮ್ಮೆ ಅವಕಾಶ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಮಧ್ಯೆ ಹಾಸನ ಜಿಲ್ಲಾಡಳಿತ ಮತ್ತು ದೇವಾಲಯದ ಕೆಲವು ಅಧಿಕಾರಿಗಳು ೨ ಲಾಡು ಪ್ರಸಾದವನ್ನು ೧೦೦ರೂ.ಗಳಿಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಸಚಿವ ಶಿವಲಿಂಗೇಗೌಡರು ೬೦ರೂ. ಗಳಿಗೆ ಮಾರಾಟ ಮಾಡಲು ದೇವಾಲಯ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದು ಮೆಚ್ಚತಕ್ಕ ನಡೆಯಾಗಿದೆ. ದೇವಿಯ ದರ್ಶನಕ್ಕೆ ೩೦೦ರೂ, ೧೦೦೦, ರೂ.ಗಳ ಟಿಕೆಟ್ ಪಡೆದವರಿಗೆ ಎರಡು ಲಾಡುಗಳನ್ನು ನೀಡುವಂತೆ ಕ್ರಮ ಕೈಗೊಂಡಿರುವುದು ಒಳ್ಳೆಯದೇ ಆಗಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು


