Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಪುನೀತ್‌ ಕೆರೆಹಳ್ಳಿ ಬಂಧನ : 14 ದಿನ ನ್ಯಾಯಾಂಗ ಬಂಧನ ; ಇಲ್ಲಿದೆ ಕಾರಣ

ಬೆಂಗಳೂರು : ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುಚ್ಚಳಿಕೆ ಬರೆದುಕೊಡಲು ನಿರಾಕರಿಸಿದ ಕಾರಣಕ್ಕೆ ಮ್ಯಾಜಿಸ್ಟ್ರೇಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಪುನೀತ್‌ಕೆರೆಹಳ್ಳಿ ವಿರುದ್ಧ 14 ಪ್ರಕರಣಗಳಿವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಬಸವನಗುರಿ ಪೊಲೀಸರು ಬಿಎನ್‌ಎಸ್‌ಎಸ್‌ನ ಸೆಕ್ಷನ್ 127 ರ ಅಡಿಯಲ್ಲಿ ಬಂಧಿಸಿ ಗುರುವಾರ ಬೆಂಗಳೂರು ದಕ್ಷಿಣ ವಿಭಾಗದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡೆಸಿದ್ದರು.

ಆವಾಗ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವುದಿಲ್ಲ ಎಂದು ಬಾಂಡ್‌ ಹಾಗೂ ಮುಚ್ಚಳಿಕೆ ಬರೆದುಕೊಡಲು ಮ್ಯಾಜಿಸ್ಟ್ರೇಟ್ ಸೂಚಿಸಿದರು. ಆದರೆ, ಇದಕ್ಕೆ ಪುನೀತ್‌ ಕೆರೆಹಳ್ಳಿಯವರು ನಿರಾಕರಣೆ ಮಾಡಿದರು. ಹೀಗಾಗಿ, ಅವರನ್ನು ಮುಂದಿನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದರು.

ಪುನೀತ್ ಕೆರೆಹಳ್ಳಿ ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ನಡೆಸುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 2023 ರ ಏಪ್ರಿಲ್‌ನಲ್ಲಿ ನಡೆದ ದನ ವ್ಯಾಪಾರಿ ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಹಿಂದೆ, ಅವರು ಕರ್ನಾಟಕದಲ್ಲಿ ಹಲಾಲ್ ವಸ್ತುಗಳ ವಿರುದ್ಧ ಅಭಿಯಾನ ನಡೆಸಿದ್ದರು. ಹಿಂದೂ ದೇವಾಲಯದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.

Tags:
error: Content is protected !!