Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಮೀಕ್ಷೆಗೆ ಮಾಹಿತಿ ನೀಡಿದರೆ ಮುಂದಿನ ಪೀಳಿಗೆಗೆ ಅನುಕೂಲ: ಡಿಸಿಎಂ ಡಿ.ಕೆ.ಶಿವಕುಮಾರ್‌

DCM DK Shivakumar

ಬೆಂಗಳೂರು: ಸಾರ್ವಜನಿಕರು ತಾಳೆಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಇಂದು ಸಮೀಕ್ಷೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಆನ್‍ಲೈನ್‍ನಲ್ಲೂ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಉದ್ಯೋಗಕ್ಕೆ ಹೊರ ರಾಜ್ಯಗಳಿಗೆ ಹೋಗಿರುವರಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗುವುದು ಅದನ್ನು ಆಧರಿಸಿ, ಆನ್‍ಲೈನ್‍ನಲ್ಲಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಮಾಹಿತಿ ನೀಡುವಂತೆ ತಿಳುವಳಿಕೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಅದನ್ನು ಮಾಡುತ್ತಿದ್ದೇವೆ. ಮಾಹಿತಿ ನೀಡದಿದ್ದರೆ ನಾವೇನು ಮಾಡಲಾಗುವುದಿಲ್ಲ. ಎಲ್ಲಾ ಜಾತಿಗಳು, ಧರ್ಮಗಳು ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ :-5 ವರ್ಷ ಸಿದ್ದರಾಮಯ್ಯನವರೇ ಸಿಎಂ: ಸಚಿವ ಜಮೀರ್‌ ಅಹಮ್ಮದ್‌

ಪ್ರಶ್ನಾವಳಿಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ಕಡಿಮೆ ಮಾಡಬೇಕು ಎಂದು ನಾನೂ ಕೂಡ ಸಲಹೆ ನೀಡಿದ್ದೆ. ಆದರೆ ಪ್ರಶ್ನೆಗಳ ಸಂಖ್ಯೆ ಅಷ್ಟೆ ಇವೆ. ಇಂದಿನ ಸಮೀಕ್ಷೆಯಲ್ಲಿ ನನ್ನನ್ನು ಕೆಲ ಪ್ರಶ್ನೆಗಳನ್ನು ಕೇಳಲಾಯಿತು. ಅದನ್ನೆಲ್ಲಾ ನನ್ನ ಬಳಿ ಕೇಳಬೇಡಿ ಎಂದು ಹೇಳಿದ್ದೇನೆ. ಅಗತ್ಯದಷ್ಟು ಮಾಹಿತಿ ನೀಡಬಹುದು. ಅನಗತ್ಯವಾದ ಪ್ರಶ್ನೆಗಳು ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಅಷ್ಟೊಂದು ಪ್ರಶ್ನೆಗಳಿಗೆ ಉತ್ತರ ನೀಡಲು ನಗರ ಪ್ರದೇಶದಲ್ಲಿ ಯಾರಿಗೂ ತಾಳ್ಮೆ ಇರುವುದಿಲ್ಲ. ಅಷ್ಟೊಂದು ಪ್ರಶ್ನೆಗಳಿರುವುದು ಇವತ್ತೆ ನನ್ನ ಗಮನಕ್ಕೆ ಬಂದಿದ್ದಾಗಿ ಹೇಳಿದರು. ಕೋಳಿಗಳು ಎಷ್ಟಿವೆ, ಮೇಕೆ ಎಷ್ಟಿವೆ, ಚಿನ್ನ ಎಷ್ಟಿದೆ ಎಂದು ಕೇಳುತ್ತಾ ಕುಳಿತರೆ ಜನ ಉತ್ತರಿಸುವುದಿಲ್ಲ. ನಗರ ಪ್ರದೇಶಗಳಲ್ಲಿ ಮೇಕೆ ಸಾಕಲಾಗುವುದಿಲ್ಲ. ಬಹುಶಃ ಹಿಂದುಳಿದ ವರ್ಗಗಳ ಆಯೋಗ ಈ ರೀತಿಯ ಪ್ರಶ್ನೆಗಳ ಸರಿಪಡಿಸುತ್ತದೆ. ನ್ಯಾಯಾಲಯವೂ ಇದನ್ನೆಲ್ಲಾ ಗಮನಿಸಿಯೇ ಮಾಹಿತಿಗಾಗಿ ಬಲವಂತ ಪಡಿಸಬಾರದು ಎಂದು ಹೇಳಿದರು.

ಸಮೀಕ್ಷಾದಾರರು ನನ್ನ ಬಳಿ ಕೇಳಿದಾಗ ಉದ್ಭವಿಸುವುದಿಲ್ಲ ಎಂದು ಹೇಳಿದ್ದೇನೆ. ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮವಾಗಿ ನಡೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ. ಜಿಎಸ್‍ಟಿ ಕಡಿತದಿಂದ ರಾಜ್ಯ ಸರ್ಕಾರಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನಮ್ಮ ತೆರಿಗೆ ನಮ್ಮ ಹಕ್ಕು, ಅದಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ನಾವು ಸಿದ್ಧ ಎಂದರು.

Tags:
error: Content is protected !!