Mysore
27
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ ಮತ್ತು ಇಂಡೀಕರಣ ಮಾಡುವ ಪ್ರಕ್ರಿಯೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಒಂದು ವರ್ಷದ ಒಳಗೆ ಮುಜರಾಯಿ ದೇವಾಲಯಗಳ ಆಸ್ತಿ ಇಂಡೀಕರಣವನ್ನು ಪೂರ್ಣಗೊಳಿಸುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ಈ ಕುರಿತು ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, 2023 ಮತ್ತು 2024ರಲ್ಲಿ 11,498 ಎಕರೆ ಆಸ್ತಿಯನ್ನು ದೇವಾಲಯಗಳ ಹೆಸರಿಗೆ ಪಹಣಿ ಇಂಡೀಕರಿಸಲಾಗಿದೆ. ಸುಮಾರು 15,413 ಎಕರೆ ಆಸ್ತಿಯನ್ನು ದೇವಾಲಯಗಳ ಹೆಸರಿಗೆ ಇಂಡೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ 20 ಸಾವರ ಎಕರೆ ದೇವಾಲಯಗಳ ಜಾಗ ಇಂಡೀಕರಣ ಮಾಡಬೇಕು. ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಇನ್ನೊಂದು ವರ್ಷದಲ್ಲಿ ಬಾಕಿ ಇರುವ ಎಲ್ಲಾ ದೇವಾಲಯಗಳ ಆಸ್ತಿ ಇಂಡೀಕರಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

 

 

Tags:
error: Content is protected !!