ಬೆಂಗಳೂರು: ಗಣೇಶೋತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
FSSAIನಿಂದ ಅನುಮತಿ ಪಡೆಯದೇ ಆಹಾರ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಗಣಪತಿ ಉತ್ಸವಕ್ಕೆ ಮೂರೇ ದಿನ ಬಾಕಿ ಇರುವಾಗ ಗಣಪತಿ ಉತ್ಸವದ ಆಯೋಜಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚನೆ ನೀಡಲಾಗಿದೆ.
ಯಾವುದೇ ಜಾಗದಲ್ಲಿ ಗಣಪತಿ ಉತ್ಸವ ಮಾಡಿದರೂ FSSAIನಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು.
ಗಣೇಶೋತ್ಸವದ ವೇಳೆ ಶುಚಿತ್ವ ಕಾಪಾಡಬೇಕು. FSSAIನಿಂದ ಅನುಮತಿ ಪಡೆಯದೇ ಪ್ರಸಾದ ವಿತರಣೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.